ಬೆಂಗಳೂರು : ಚಲಿಸುತ್ತಿದ್ದಾಗಲೇ BMTC ಬಸ್ ಟೈರ್ ಸ್ಫೋಟಗೊಂಡು ಓರ್ವ ಪ್ರಯಾಣಿಕ ಗಾಯಗೊಂಡ ಘಟನೆ ನಗರದ ಸಿಂಗಸಂದ್ರದಲ್ಲಿ ಇಂದು ಸಂಜೆ ನಡೆದಿದೆ.

ಬಸ್ ಇಂದು (ಡಿ.28) ಬೆಳಗ್ಗೆ ಅತ್ತಿಬೆಲೆಯಿಂದ ಮೆಜೆಸ್ಟಿಕ್ ಕಡೆ ಹೋರಟಿತ್ತು. ಈ ವೇಳೆ ಬಸ್‌ನ ಟೈರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದರಿಂದ ಬಸ್‌ನ ಟೈರ್ ಬಳಿಯ ಸೀಟ್‌ಗೂ ಹಾನಿಯಾಗಿದೆ. ಅಲ್ಲದೇ ಕೆಳಭಾಗದಲ್ಲಿ ಛಿದ್ರವಾಗಿ ಬಸ್ ತುಂಬ ಧೂಳು ಆವರಿಸಿದೆ.
ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದ್ದು, ಸ್ಫೋಟದಿಂದ ಉಂಟಾದ ಶಬ್ದದಿಂದ ಜನ ಕೆಲಕಾಲ ಕಂಗಾಲಾಗಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ : ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಕನ್ನಡಿಗರ ಸ್ವಾಭಿಮಾನ ಅಡವಿಡಬೇಡಿ | ಸಿಎಂ-ಡಿಸಿಎಂ ವಿರುದ್ದ ಸಿ.ಟಿ.ರವಿ ವಾಗ್ದಾಳಿ


















