ಬೆಂಗಳೂರು : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಹೈವೋಲ್ಟೇಜ್ ಪಂದ್ಯಗಳನ್ನು ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಗುಡ್ ನ್ಯೂಸ್ ನೀಡಿದೆ.
ಏಪ್ರಿಲ್ 15, 18 ಮತ್ತು 24ರಂದು ನಡೆಯಲಿರುವ ಪಂದ್ಯಗಳ ದಿನದಂದು ರಾತ್ರಿ 11ರಿಂದ ತಡರಾತ್ರಿ 2 ಗಂಟೆವರೆಗೆ ನಮ್ಮ ಮೆಟ್ರೋ ಸಂಚಾರ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಏಪ್ರಿಲ್ 15, 18 ಮತ್ತು 24ರಂದು ನಡೆಯುವ ಐಪಿಎಲ್ ಪಂದ್ಯಗಳಿಗೆ ಹೆಚ್ಚುವರಿ ಮೆಟ್ರೋ ಸೇವೆಯನ್ನು ಬಿಎಂಆರ್ಸಿಎಲ್ ಘೋಷಿಸಿದೆ. ಐಪಿಎಲ್ ಅಭಿಮಾನಿಗಳಿಗೆ ಸಹಕಾರಿ ಆಗುವ ದೃಷ್ಟಿಯಲ್ಲಿ ಹೆಚ್ಚುವರಿ ಸೇವೆಯನ್ನು ಒದಗಿಸಲಾಗುತ್ತಿದೆ. ರಾತ್ರಿ 11ರಿಂದ ತಡರಾತ್ರಿ 2 ಗಂಟೆವರೆಗೆ ಮೆಟ್ರೋ ಸಂಚಾರ ಇರಲಿದೆ.
ಕೊನೆಯ ರೈಲುಗಳ ಸಮಯ
- ವೈಟ್ಫೀಲ್ಡ್: ರಾತ್ರಿ 12:30 ಗಂಟೆಗೆ
- ಚಲ್ಲಘಟ್ಟ: ರಾತ್ರಿ 12:45 ಗಂಟೆಗೆ
- ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ಮಾದವಾರ: ರಾತ್ರಿ 12:45 ಗಂಟೆಗೆ
- ಬೊಮ್ಮಸಂದ್ರ: ರಾತ್ರಿ 1 ಗಂಟೆಗೆ
- ಆರ್.ವಿ. ರಸ್ತೆ: ರಾತ್ರಿ 2 ಗಂಟೆಗೆ
- ಮೆಜೆಸ್ಟಿಕ್ನಿಂದ ನಾಲ್ಕೂ ದಿಕ್ಕುಗಳಿಗೆ ತಡರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ.
ಇದನ್ನೂ ಓದಿ : ಪೋಸ್ಟ್ ಆಫೀಸ್ನಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ ವರ್ಷಕ್ಕೆ ಎಷ್ಟು ಬಡ್ಡಿ? ಇಲ್ಲಿದೆ ಸುರಕ್ಷಿತ ಹೂಡಿಕೆ ಮ್ಯಾಜಿಕ್


















