ಬೆಂಗಳೂರು ಗ್ರಾಮಾಂತರ : ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ರಕ್ತ ಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಏಜಾಜ್ ಷರೀಪ್(47), ಪಯಾಜ್ ಷರೀಪ್( 47) ಮತ್ತು ಸಾಧಿಕ್ ಖಾನ್( 34) ಬಂಧಿತ ಆರೋಪಿಗಳು. ರಕ್ತ ಚಂದನ ಮರದ ತುಂಡುಗಳನ್ನು ತರಿಸಿಕೊಂಡು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಟೇಪ್ ಸುತ್ತಿ , ಹೊಸಕೋಟೆಯ ಕೊಳತ್ತೂರು ಗ್ರಾಮದ ಡಿಲವರಿ ಟ್ರಾನ್ಸ್ ಪೋರ್ಟ್ ಕಂಪನಿ ಮೂಲಕ ಹರಿಯಾಣದ ವಿಷ್ಣುಕುಮಾರ್ ಎಂಬುವವರಿಗೆ ಪಾರ್ಸಲ್ ಮಾಡಲು ಮುಂದಾಗಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಬಂದ ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 25 ಲಕ್ಷ ಬೆಲೆ ಬಾಳುವ 1093 ಕೆ.ಜಿ ತೂಕದ 102 ರಕ್ತ ಚಂದನ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಹೊಸಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.