ಬೆಂಗಳೂರು : ನಗರದಲ್ಲಿ ವೈದ್ಯನೊಬ್ಬ ಕಣ್ಣಿಗೆ ಬಟ್ಟೆ ಕಟ್ಟಿ ಆಪರೇಷನ್ ಮಾಡಿರುವ ಆರೋಪ ಕೇಳಿಬಂದಿದ್ದು, ಶೋಕಿಗಾಗಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾನೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗೆ ದೂರು ನೀಡಲಾಗಿದೆ.

ಅನ್ನಪೂರ್ಣೇಶ್ವರಿ, ನಾಗರಬಾವಿ ಖಾಸಗಿ ಆಸ್ಪತ್ರೆ ಕ್ಲಿನಿಕ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಸಿ.ವಿ. ಕುಮಾರ್ ಎಂಬ ವೈದ್ಯನ ವಿರುದ್ಧ ದೂರು ದಾಖಲಾಗಿದ್ದು, ಈತ ಗಾಯಳುವಿಗೆ ವಿಕಾರವಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆ ಹಲವು ತಿಂಗಳುಗಳ ಹಿಂದೆ ನಡೆದಿದ್ದು, ಈ ಸಂಬಂಧ ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಅಭಿಮಾನಿಗಳ ಸಂಘ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗೆ ದೂರು ನೀಡಿದೆ.

ದೂರಿನ ಸಾರಾಂಶ ಹೀಗಿದೆ : ಸಿ.ವಿ. ಕುಮಾರ್ ಎಂಬ ವೈದ್ಯರು On Call Orthopaedic Surgeonರವರು ಕಣ್ಣಿಗೆ ಬಟ್ಟೆ ಕಟ್ಟಿ ಜನರ ಆಪರೇಷನ್‌ನ್ನು ಶೋಕಿಗಾಗಿ ಜನರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದು, ಜನರ ಜೀವನಕ್ಕೆ ಅಪಾಯ ಉಂಟಾಗುವಂತಹ ಸ್ಥಿತಿಯನ್ನು ತಂದಿರುತ್ತಾರೆ. ಇವರ ಬಗ್ಗೆ ತಾವುಗಳು ಕಾನೂನು ರೀತಿಯಲ್ಲಿ ಕೆ.ಎಂ.ಸಿ.ಆಕ್ಷನಿಂದ ವಜಾಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ನ್ಯೂ ಲೈಫ್ ಆಸ್ಪತ್ರೆಯಲ್ಲಿ ಮತ್ತು ಕಾನ್ಸಿಡ್ ಆಸ್ಪತ್ರೆ ಮತ್ತು ಮಧು ಆಸ್ಪತ್ರೆಎ, ಶ್ರೀರಾಮ್ ಆಸ್ಪತ್ರೆ ಈಗೆ ಹಲವು ಆಸ್ಪತ್ರೆಗಳಲ್ಲಿ ಈ ರೀತಿಯಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.