ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ (Cubbon Park) ಆಯೋಜಿಸಲಾಗಿದ್ದ ಬ್ಲೈಂಡ್ ಡೇಟಿಂಗ್ ಕಾರ್ಯಕ್ರಮವನ್ನು ವಿರೋಧದ ಮಧ್ಯೆ ಕ್ಯಾನ್ಸಲ್ ಮಾಡಲಾಗಿದೆ.
ಬುಕ್ ಮೈ ಶೋ ಬ್ಲೈಂಡ್ ಡೇಟಿಂಗ್ (Blind Dating) ಕಾರ್ಯಕ್ರಮದ ಬಗ್ಗೆ ಜಾಹೀರಾತು ಹೊರಡಿಸಲಾಗಿತ್ತು. 199 ರೂ.ಗೆ ಡೇಟಿಂಗ್ ಟಿಕೆಟ್ ನೀಡುವುದಾಗಿ ಹೇಳಿಕೊಂಡಿದ್ದರು. ಅಪರಿಚಿತ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡಲು ಅವಕಾಶ ಕಲ್ಪಿಸುವ ಶೋ ಆಯೋಜಿಸಲಾಗಿತ್ತು. ಈ ಶೋಗೆ 18 ವರ್ಷ ತುಂಬಿರುವ ಯುವಕ-ಯುವತಿಯರಿಗೆ ಅಹ್ವಾನ ನೀಡಲಾಗಿತ್ತು. ಆಗಸ್ಟ್ 2 ರಿಂದ 31 ರವರೆಗೆ ಈ ಬ್ಲೈಂಡ್ ಡೇಟ್ ಈವೆಂಟ್ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದರು.
ಆದರೆ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಬಗ್ಗೆ ತೋಟಗಾರಿಕೆ ಅಧಿಕಾರಿಗಳು ಇಲಾಖೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಕಬ್ಬನ್ ಪಾರ್ಕ್ ಪೊಲೀಸರು ಆಯೋಜಕರನ್ನು ಕರೆಯಿಸಿ ವಿಚಾರಿಸಿದ್ದರು. ನಂತರ ಕ್ಷಮಾಪಣೆ ಪತ್ರ ಬರೆಯಿಸಿಕೊಂಡು ಕಳುಹಿಸಿದ್ದಾರೆ. ಹೀಗಾಗಿ ಕಾರ್ಯಕ್ರಮ ರದ್ದು ಮಾಡಿದ್ದಾರೆ.



















