ಬೆಂಗಳೂರು : ಕನ್ನಡದ ಅನೇಕ ಧಾರವಾಹಿಗಳಲ್ಲಿ ಪೋಷಕ ಪಾತ್ರ ಮಾಡಿರುವ ನಟಿ ಆಶಾ ಜೋಯಿಸ್ ಸ್ನೇಹಿತೆಯ ಖಾಸಗಿ ವೀಡಿಯೋ ಫೋಟೋ ಕದ್ದು ಹಂಚಿ ಬ್ಲಾಕ್ ಮೇಲ್ ಮಾಡಿದ್ದಾರೆ.
ಶೃಂಗೇರಿ ಶಾರದಾ ಪೀಠದ ಜೋಯಿಸ್ ಕುಟುಂಬ ಸದಸ್ಯೆ ಹಾಗು ನಟಿಯಾದ ಇವರು 2 ಕೋಟಿ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು ಎಂದು 61 ವರ್ಷದ ಪಾರ್ವತಿ ಎಂಬಾಕೆ ದೂರು ನೀಡಿದ್ದಾರೆ.
ಮಿಸ್ ಇಂಡಿಯಾ ಪ್ಲಾನೆಟ್ 2016 ನಲ್ಲಿ ಸ್ಪರ್ಧಿಯಾಗಿದ್ದ ಇವರಿಗೆ ಮೂರು ವರ್ಷದ ಹಿಂದೆ ಆಶಾ ಜೋಯಿಸ್ ಗೆ ಪಾರ್ವತಿ ಪರಿಚಯವಾಗಿದ್ದರು. ತಾನು ಶೃಂಗೇರಿ ಮಠದ ಜೋಯಿಸ್ ಕುಟುಂಬದವಳು ಎಂದು ಹೇಳಿಕೊಂಡಿದ್ದಳು. ಪಾರ್ವತಿ ,ತಾನು ಕೆಲಸ ಮಾಡುವ ಕಂಪನಿ ಮಾಲೀಕರ ಜೊತೆ ಮದುವೆಯಾಗಿದ್ದು, ಈ ವಿಚಾರವನ್ನು ನಟಿ ಆಶಾಗೆ ತಿಳಿಸಿದ್ದರು. ಬಳಿಕ ಎರಡು ಕೋಟಿ ಹಣಕ್ಕೆ ಆಶಾ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದರು. ಇದಕ್ಕೆ ಪಾರ್ವತಿ ಒಪ್ಪದೆ ನಿರಾಕರಿಸಿದ್ದಳು. ಇದೇ ದ್ವೇಷಕ್ಕೆ ಖಾಸಗಿ ವಿಡಿಯೋಗಳು ,ವಾಯ್ಸ್ ರೆಕಾರ್ಡ್ ಹಾಗು ಪ್ರೈವೇಟ್ ಫೋಟೋಗಳನ್ನ ನಟಿ ಕದ್ದು, ಪಾರ್ವತಿ ಪರಿಚಿತ ವ್ಯಕ್ತಿಗಳಿಗೆ ಕಳುಹಿಸಿದ್ದಾಳೆ.
ಈ ಹಿನ್ನಲೆ ತನ್ನ ಘನತೆಗೆ ಕುಂದುಂಟಾಗಿದೆ ಹಾಗು ತನ್ನ ಖಾಸಗಿ ಡೇಟಾವನ್ನ ಕದ್ದಿದ್ದಾರೆಂದು ಆರೋಪಿಸಿ ದೂರು ನಟಿ ಆಶಾ ಜೋಯಿಸ್ ವಿರುದ್ದ ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ ಐ ಆರ್ ದಾಖಲಿಸಿದ್ದಾರೆ.



















