ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿ ಅಪರೂಪದ ದೃಶ್ಯ ಒಂದು ಕಂಡುಬಂದಿದೆ. ಭದ್ರಾ ನದಿಯ ಸಮೀಪ ಚಿರತೆ ಮತ್ತು ಬ್ಲ್ಯಾಕ್ ಪ್ಯಾಂಥರ್ ಒಟ್ಟಿಗೆ ರೌಂಡ್ಸ್ ಮಾಡುತ್ತಿರುವ ದೃಶ್ಯವನ್ನು ಪ್ರವಾಸಿಗರ ಕ್ಯಾಮರಾಗಳು ಸೆರೆಹಿಡಿದಿದ್ದಾರೆ.
ಬೋಟ್ ಸಫಾರಿಗಾಗಿ ಬಂದ ಪ್ರವಾಸಿಗರಿಗೆ ಈ ಅದ್ಭುತ ನೈಸರ್ಗಿಕ ದೃಶ್ಯ ಲಕ್ಕವಳ್ಳಿ ವಲಯದಲ್ಲಿ ಸಿಕ್ಕಿದ್ದು, ಚಿರತೆ ಮತ್ತು ಬ್ಲ್ಯಾಕ್ ಪ್ಯಾಂಥರ್ ಒಟ್ಟಿಗೆ ಒಂದೇ ಸ್ಥಳದಲ್ಲಿ ನೀರು ಕುಡಿಯುತ್ತಿರುವ ದೃಶ್ಯ ಅಪರೂಪವೆಂದು ಜಂಗಲ್ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿ ಇಂತಹ ಕರಿಚಿರತೆಗಳು ನೋಡಲಾಗುವುದು ಅಪರೂಪವಾಗಿದ್ದು, ಸ್ಥಳೀಯ ನೈಸರ್ಗಿಕ ಪರಿಸರದಲ್ಲಿ ಜೀವ ವೈವಿಧ್ಯತೆಯ ಮಹತ್ವವನ್ನು ಒತ್ತಿ ತೋರಿಸುತ್ತದೆ.
ಇದನ್ನೂ ಓದಿ : 10 ಎಕರೆ ಜಾಗಕ್ಕೆ 5 ಕೋಟಿ ಲಂಚ.. ನಕಲಿ PID ನಂಬರ್ ನೀಡಿ ಎ-ಖಾತ ಮಾಡಿಕೊಟ್ಟ GBA ಅಧಿಕಾರಿಗಳು | NR ರಮೇಶ್ ಆರೋಪ



















