ಬೆಂಗಳೂರು: ಸರ್ಕಾರದ ದರ ಏರಿಕೆ (Price Hike) ವಿರುದ್ಧ ಬಿಜೆಪಿ ಬಿಜೆಪಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಅಂತ್ಯವಾಗಿದೆ. ಬಿಜೆಪಿ (BJP) ಅಹೋರಾತ್ರಿ ಧರಣಿ ಇಂದು ತೀವ್ರ ಸ್ವರೂಪಕ್ಕೆ ತಿರುಗಿತ್ತು. ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಬಿಜೆಪಿ ನಾಯಕರು, ಅಪಾರ ಕಾರ್ಯಕರ್ತರು ಸಿಎಂ ಮನೆ ಮುತ್ತಿಗೆ ಯತ್ನ ನಡೆಸಿದ್ದು, ನೂಕಾಟ -ತಳ್ಳಾಟ ನಡೆದಿದೆ.
ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ಕೂಡ ನಡೆಯಿತು. ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್ ನಲ್ಲಿ (Freedom Park) ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಬುಧವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿತ್ತು. ಇಂದು ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭಾಗಿಯಾಗಿದ್ದರು.
ಆನಂತರ ಯಡಿಯೂರಪ್ಪ ನೇತೃತ್ವದಲ್ಲಿ ಸಿಎಂ ಮನೆ ಮುತ್ತಿಗೆ ಹಾಕಲು ನಾಯಕರು, ಕಾರ್ಯಕರ್ತರು ಮುಂದಾಗಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ರಸ್ತೆಯಲ್ಲೇ ಎರಡು ಬದಿ ತಡೆದು ಸಿಎಂ ಮನೆ ಮುತ್ತಿಗೆ ವಿಫಲಗೊಳಿಸಿದರು.
ಸಿಎಂ, ಡಿಸಿಎಂ ಹಾಗೂ ಸಚಿವರ ಫೋಟೋ ಇದ್ದ ರಾವಣನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಕಾರ್ಯಕರ್ತೆಯರು ಶಾಸಕಿ ಭಾರತಿ ಶೆಟ್ಟಿ ನೇತೃತ್ವದಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.