ಬೆಂಗಳೂರು: ರಾಜ್ಯದಲ್ಲಿ ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಬಂದಮೇಲೆ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಾಗರ ವಿಧಾಸನಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಶಾಸಕರು, ಎಸ್ಐಟಿ ತನಿಖೆಗೆ ಆದೇಶಿಸಿದಾಗ ಸುಮ್ಮನಿದ್ದು, ಈಗ ಸುಖಾಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಸೌಜನ್ಯ ಪ್ರಕರಣವನ್ನು ಒಳಗೊಂಡು ಇಲ್ಲಿವರೆಗೆ ನಡೆದಿರುವ ಎಲ್ಲಾ ಪ್ರಕರಣವನ್ನು ಬಿಜೆಪಿ ರಾಜಕೀಯವಾಗಿ ಬಿಂಬಿಸಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದೀರಿ. ದಾಖಲೆಗಳು ನಿಮ್ಮಲ್ಲಿ ಇದ್ದರೆ ಎಸ್.ಐ.ಟಿಗೆ ಒಪ್ಪಿಸಿ. ಎಲ್ಲೋ ಪಾಕಿಸ್ತಾನ ಟಿವಿಯಲ್ಲಿ ಧರ್ಮಸ್ಥಳ ಪ್ರಕರಣದ ಬಗ್ಗೆ ಸುದ್ದಿ ಬಂತು, ಇಲ್ಲಿ ಹಾಗಾಯಿತು, ಅಲ್ಲಿ ಹಾಗಾಯಿತು ಎನ್ನುವುದನ್ನೆಲ್ಲಾ ಬಿಟ್ಟು ತನಿಖೆಗೆ ಸಹಕರಿಸಿ ಎಂದು ಕಿಡಿಕಾರಿದ್ದಾರೆ.
ಈ ವಿಚಾರವಾಗಿ ಸದನದಲ್ಲಿ ಗೃಹ ಸಚಿವರು ಸ್ಪಷ್ಟ ಉತ್ತರ ನೀಡಿದರು. ನಾವು ಕೂಡ ಧರ್ಮಸ್ಥಳ ಪರವಾಗಿ ಇದ್ದೇವೆ ಎಂದು ತಿಳಿಸಿದ್ದಾರೆ.



















