ಬಿಜೆಪಿ ನೀಡಿರುವ ಪ್ರಣಾಳಿಕೆಯೇ ಮಹಾರಾಷ್ಟ್ರದ ಅಭಿವೃದ್ಧಿ ಮಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪುಣೆಯಲ್ಲಿ ನಡೆದ ರೋಡ್ ಶೋ ವೇಳೆ ಮಾತನಾಡಿದ ಅವರು, ರೈತರ ಏಳಿಗೆಯಾದರೆ ಮಾತ್ರ ಮಹಾರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ, ಕಾಂಗ್ರೆಸ್ ಜಾತಿ-ಧರ್ಮಗಳ ಮಧ್ಯೆ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಈಗ ಬುಡಕಟ್ಟು ಸಮಾಜವನ್ನು ಜಾತಿಗಳಾಗಿ ವಿಭಜಿಸುವ ಮೂಲಕ ದುರ್ಬಲಗೊಳಿಸಲು ಬಯಸಿದೆ. ನಮ್ಮ ಬುಡಕಟ್ಟು ಸಮಾಜದವರು ಎಸ್ಟಿ ಗುರುತು ಕಳೆದುಕೊಳ್ಳಬೇಕೆಂದು ಕಾಂಗ್ರೆಸ್ ಬಯಸುತ್ತಿದೆ. ನಮ್ಮ ದೇಶದಲ್ಲಿ ಶೇ. 10ರಷ್ಟು ಬುಡಗಟ್ಟು ಸಮಾಜ ಇದೆ ಎಂದು ಹೇಳಿದ್ದಾರೆ.
ಕಾಂಗ್ ಹಿಂದುಳಿದ ವರ್ಗಗಳನ್ನು ಕಾಂಗ್ರೆಸ್ ಪಕ್ಷವು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ, ಎಂದೂ ದಲಿತರು, ಹಿಂದುಳಿದ ವರ್ಗಗಳ ಪ್ರಗತಿಗೆ ಪಕ್ಷ ಅವಕಾಶ ನೀಡಿರಲಿಲ್ಲ. ಅಭಿವೃದ್ಧಿಯು ಅಘಾಡಿ ಕೈಯಲ್ಲಿ ಇಲ್ಲ. ಅಭಿವೃದ್ಧಿಗೆ ಬ್ರೇಕ್ ಹಾಕಲು ಅವರು ಪಿಎಚ್ ಡಿ ಮಾಡಿದ್ದಾರೆ. ನಿಮ್ಮ ಒಗ್ಗಟ್ಟು ಒಡದರೆ, ಅವರು ಅರಾಮಾಗಿ, ದುಡ್ಡು ಹೊಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ಅಘಾಡಿ ಕೆಲಸ ಮಾಡುತ್ತಿದೆ. ಈ ಷಡ್ಯಂತ್ರಕ್ಕೆ ನಾವು ಬಲಿಯಾಗುವುದು ಬೇಡ, ನಾವು ಒಗ್ಗಟ್ಟಾಗಿ ಉಳಿಯಬೇಕು ಎಂದು ಕರೆ ನೀಡಿದ್ದಾರೆ.
ನಿಮ್ಮ ಮೀಸಲಾತಿಯನ್ನು ಮೊದಲು ಕಾಂಗ್ರೆಸ್ ಕಿತ್ತುಕೊಳ್ಳಲಿದ್ದು, ಕಾಂಗ್ರೆಸ್‌ನ ರಾಜಮನೆತನದವರು ಈ ದೇಶವನ್ನು ಆಳಲು ಹುಟ್ಟಿದವರು ಎಂಬ ಮನಸ್ಥಿತಿ ಯಾವಾಗಲೂ ಇದೆ. ಹೀಗಾಗಿ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ದಲಿತರು, ಹಿಂದುಳಿದವರು, ಆದಿವಾಸಿಗಳು ಮುಂದೆ ಹೋಗಲು ಬಿಡಲಿಲ್ಲ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನವೆಂಬರ್ 23 ರಂದು ಫಲಿತಾಂಶ ಹೊರ ಬೀಳಲಿದೆ.