ನವದೆಹಲಿ: ಪ್ರಸಕ್ತ ವರ್ಷದಲ್ಲಿ ಬಿಜೆಪಿಗೆ ಮೂರು ಪಟ್ಟು ದೇಣಿಗೆ ಹೆಚ್ಚಾಗಿ ಹರಿದು ಬಂದಿದೆ. 2022-23ರಲ್ಲಿ ಬಿಜೆಪಿ ಪಡೆದ ದೇಣಿಗೆಗಿಂತ 2023-24 ರಲ್ಲಿ ಮೂರು ಪಟ್ಟು ಹೆಚ್ಚು ದೇಣಿಗೆ ಪಡೆದಿದೆ. ಈ ಬಾರಿ 2,244 ಕೋಟಿ ರೂ. ವೈಯಕ್ತಿಕ, ಟ್ರಸ್ಟ್ ಹಾಗೂ ಕಾರ್ಪೋರೇಟ್ ಸಂಸ್ಥೆಗಳ ದೇಣಿಗೆ ಬಿಜೆಪಿಗೆ ಹರಿದು ಬಂದಿದೆ.
ಆದರೆ, ಈ ಬಾರಿ ಕಾಂಗ್ರೆಸ್ ಗೆ ಬಂದ ದೇಣಿಗೆಯಲ್ಲಿ ಭಾರೀ ಕಡಿಮೆಯಾಗಿದೆ. ಕಾಂಗ್ರೆಸ್ ಗೆ ಈ ವರ್ಷ 288.9 ಕೋಟಿ ಈ ವರ್ಷ ಹಾಗೂ ಕಳೆದ ವರ್ಷ 2022-23 ರಲ್ಲಿ 79.9 ಕೋಟಿ ರೂ. ದೇಣಿಗೆ ಸಂಗ್ರಹವಾಗಿತ್ತು.
ಎಲೆಕ್ಷನ್ ಕಮಿಷನ್ ನಲ್ಲಿರುವ 2023-24 ರ ದೇಣಿಗೆ ಸಂಗ್ರಹದ ಅಂಕಿ ಅಂಶಗಳಂತೆ, ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಬಿಜೆಪಿಗೆ 723.6 ಕೋಟಿ ದೇಣಿಗೆ ನೀಡಿದೆ. ಕಾಂಗ್ರೆಸ್ ಗೂ 155.4 ಕೋಟಿ ನೀಡಿದೆ. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ನ ಗರಿಷ್ಠ ದೇಣಿಗೆದಾರರು ಮೇಘ ಇಂಜಿನಿಯರಿಂಗ್ ಹಾಗೂ ಇನ್ಫ್ರಾ ಲಿಮಿಟಿಡ್, ಸೆರಮ್ ಇನ್ಸ್ಟಿಟ್ಯೂಟ್, ಆರ್ಸೆಲೆರ್ ಮಿತ್ತಲ್ ಗ್ರೂಪ್ ಹಾಗೂ ಭಾರತಿ ಏರ್ಟೆಲ್ ಆಗಿದ್ದಾರೆ.