ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಎರಡು ವಿಡಿಯೋಗಳನ್ನು ರಾಜ್ಯ ಬಿಜೆಪಿ ಪೋಸ್ಟ್ ಮಾಡಿ ವ್ಯಂಗ್ಯವಾಡಿದೆ.
ಸಿದ್ದರಾಮಯ್ಯ (Siddaramaiah) ಅವರು ವೇದಿಕೆ ಮೇಲಿದ್ದ ಸರ್ಕಾರಿ ಅಧಿಕಾರಿಯನ್ನು ಎದ್ದು ಕಳುಹಿಸಿದ್ದು ಮತ್ತು ಆರ್ಸಿಬಿ (RCB) ಕಾರ್ಯಕ್ರಮದಲ್ಲಿ ತಮ್ಮ ಮೊಮ್ಮಗನಿಗೆ ವಿಶೇಷ ಕುರ್ಚಿ ವ್ಯವಸ್ಥೆ ಮಾಡಿಸಿರುವ ವಿಡಿಯೋವನ್ನು ಹಂಚಿಕೊಂಡು ವ್ಯಂಗ್ಯವಾಡಿದೆ.
ಸಿದ್ದರಾಮಯ್ಯ ಅವರು ಅಧಿಕಾರಿಗಳ ಮೇಲೆ ಆಕ್ರೋಶಗೊಂಡಿರುವ ವಿಡಿಯೋ ಕೂಡ ವೈರಲ್ ಆಗಿವೆ. ವಿಜಯನಗರ ಜಿಲ್ಲೆಯಲ್ಲಿ ನಡೆದಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಡಿಸಿಯನ್ನು ಗದರಿಸಿ, ಬೇರೆ ಸೀಟ್ನಲ್ಲಿ ಕೂರುವಂತೆ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಆರ್ಸಿಬಿ ಆಟಗಾರರಿಗೆ ಸನ್ಮಾನಿಸುತ್ತಿದ್ದ ಸಂದರ್ಭದಲ್ಲಿ ಮೊಮ್ಮಗನಿಗೆ ವಿಶೇಷ ಕುರ್ಚಿ ವ್ಯವಸ್ಥೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಈ ಎರಡೂ ವಿಡಿಯೋಗಳನ್ನು ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, “ಮೊಮ್ಮಗನಿಗೊಂದು ನ್ಯಾಯ, ಅಧಿಕಾರಿಗಳಿಗೆ ಒಂದು ನ್ಯಾಯ ಎಂದು ಪ್ರಶ್ನಸಿದೆ. ಇದು ಸಿದ್ದು ನ್ಯಾಯನಾ? ಅಂದು ಕುಳಿತಿದ್ದ ಡಿಸಿಗೆ ಬೈಗುಳದ ಭಾಗ್ಯ, ಇಂದು ಮೊಮ್ಮಗನಿಗೆ ವಿಶೇಷ ಕುರ್ಚಿ ಭಾಗ್ಯ” ಎಂದು ಪ್ರಶ್ನಿಸಿದೆ.



















