ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಕಮಲದ ಚಿಹ್ನೆ ನೀಡಬಾರದು ಎಂದು ಕೋರಿ ಸುಪ್ರೀಂ ಕೋರ್ಟ್ ಗೆ ಮನವಿಯೊಂದು ಸಲ್ಲಿಕೆಯಾಗಿದೆ.
ಭಾರತದ ರಾಷ್ಟ್ರೀಯ ಪುಷ್ಪ ಕಮಲದ ಹೂವು. ಆದರೆ, ಇದನ್ನು ಯಾವುದೋ ಒಂದು ರಾಜಕೀಯ ಪಕ್ಷದ ಚಿಹ್ನೆಯಾಗಿ ಬಳಸುವುದು ಸರಿಯಲ್ಲ. ಹೀಗಾಗಿ ಚುನಾವಣೆಯಲ್ಲಿ ಕಮಲದ ಹೂವನ್ನು ಚಿಹ್ನೆಯಾಗಿ ನೀಡಬಾರದು. ಅದು ತಪ್ಪು. ಈ ರೀತಿಯಾಗಿ ಮಾಡುವುದರಿಂದ ರಾಷ್ಟ್ರೀಯ ಸಮಗ್ರತೆಗೆ ಅವಮಾನ ಮಾಡಿದಂತಾಗುತ್ತದೆ ಎಂದು ಅರ್ಜಿದಾರ ಜಯಂತ್ ವಿಪತ್ ವಾದಿಸಿದ್ದಾರೆ. ಜಯಂತ್ ಅವರು ಇದೇ ವಿಷಯವಾಗಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲು ಏರಿತ್ತು. ಆದರೆ, ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಆಗ ಕೋರ್ಟ್ ವಜಾ ಮಾಡಿತ್ತು.
ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಪ್ರಸನ್ನ ಬಿ. ವರ್ಲೆ ಅವರನ್ನು ಒಳಗೊಂಡ ಪೀಠ ಈ ಅರ್ಜಿಯ ಕುರಿತು ವಿಚಾರಣೆ ನಡೆಸಿದರು. ಈ ಕುರಿತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಕೂಡ ನಿರಾಕರಿಸಿತು. ಈ ರೀತಿಯ ಪ್ರಕರಣ ದಾಖಲು ಮಾಡಿ ಹೆಸರು ಹಾಗೂ ಪ್ರಖ್ಯಾತಿ ಗಳಿಸಲು ಯತ್ನಿಸುತ್ತಿದ್ದೀರಾ? ನಿಮಗೆ ಯಾವ ರೀತಿಯ ಪರಿಹಾರ ಬೇಕು? ಎಂದು ಪ್ರಶ್ನಿಸಿತು. ನೀವು ಕೇವಲ ಪ್ರಚಾರ ಪಡೆಯಲು ಈ ರೀತಿಯ ಅರ್ಜಿ ದಾಖಲು ಮಾಡಿದ್ದೀರಾ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅರ್ಜಿ ವಜಾ ಮಾಡಿತು.