ನವದೆಹಲಿ: ದೆಹಲಿಯಲ್ಲಿ ಬಿಜೆಪಿ ರೆಬೆಲ್ಸ್ ತಂಡ ಲೀಡರ್ ರನ್ ನಡೆಸಿದ್ದಾರೆ.
ಇಂದು ರೆಬಲ್ಸ್ ನಾಯಕರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈಗಾಗಲೇ ಕೇಂದ್ರದ ಕೆಲವು ಸಚಿವರನ್ನು ರೆಬಲ್ ತಂಡ ಭೇಟಿ ಮಾಡಿ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ರೆಬೆಲ್ಸ್ ತಂಡ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.
ಸೋಮವಾರ ರಾತ್ರಿ ರಾಜ್ಯದ ಸಂಸದರೊಂದಿಗೆ ಮಾತುಕತೆ ನಡೆಸಲಾಗಿತ್ತು. ಇಂದು ಹಿರಿಯ ನಾಯಕರ ಭೇಟಿ ಮಾಡಲಾಗುತ್ತಿದೆ. ಬಸವರಾಜ್ ಬೊಮ್ಮಾಯಿ ,ತೇಜಸ್ವಿ ಸೂರ್ಯ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ರಾಜ್ಯ ಸಂಸದರೊಂದಿಗೆ ಈಗಾಗಲೇ ರೆಬೆಲ್ಸ್ ನಾಯಕರು ಚರ್ಚೆ ನಡೆಸಿದ್ದಾರೆ.
ಶಾಸಕ ಸತೀಶ್ ಜಾರಕಿಹೊಳಿ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಇದ್ದರು. ಇಂದು ಬಸನಗೌಡ ಪಾಟೀಲ್ ಯತ್ನಾಳ್ ಕೂಡ ದೆಹಲಿಗೆ ಹೊರಟಿದ್ದಾರೆ. ಅಲ್ಲಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಟಾಂಗ್ ಕೊಡಲು ರೆಬೆಲ್ಸ್ ತಂಡ ಪ್ರಯತ್ನ ನಡೆಸುತ್ತಿದೆ.