ಬೆಂಗಳೂರು : ಯೂರಿಯಾ ಕೊರತೆ ಇದೆ ಎಂದು ಇವರಿಗೆ(ಬಿಜೆಪಿ ನಾಯಕರಿಗೆ) ಇನ್ನೆಷ್ಟು ಬಾರಿ ಹೇಳಬೇಕು ? ಯೂರಿಯಾ ಕಡಿಮೆ ಉಪಯೋಗಿಸಬೇಕು ಎಂದು ಕೇಂದ್ರ ಸರ್ಕಾರದ ಆದೇಶ ಕೂಡ ಇದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಯೂರಿಯಾ ಕೊರತೆಯ ಬಗ್ಗೆ ನಾವು ಕೂಡ ರೈತರಿಗೆ ಹೇಳಿದ್ದೇವೆ. ಇವರು ಈ ರೀತಿ ಪ್ರತಿಭಟನೆ ಮಾಡದೇ ಇದ್ದಿದ್ದರೆ ನಾವು ಕೇಂದ್ರ ಸರ್ಕಾರದ ಸೂಚನೆಯನ್ನು ಹೇಳುತ್ತಿದ್ದೇವು. ಆದರೆ ಇದೀಗ ನಾವು ಮನವರಿಕೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮಗೆ ಕೇಂದ್ರದಿಂದಲೇ ಯೂರಿಯಾದ ಪೂರೈಕೆ ಕಡಿಮೆಯಾಗುತ್ತಿದೆ ಎಂದು ಗೊತ್ತಿದ್ದರೂ ಕೂಡ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಸದನದಲ್ಲಿ ಕೇಳಿದರೆ ನಾವು ಸೂಕ್ತ ಉತ್ತರ ಕೊಡುತ್ತೇವೆ ಎಂದಿದ್ದಾರೆ.
ರೈತರ ಆತ್ಮಹತ್ಯೆಯನ್ನು ಕಡಿಮೆ ಮಾಡಬೇಕು ಎಂದು 5 ಗ್ಯಾರಂಟಿ ಯೋಜನೆಗಳನ್ನು ನೀಡಲಾಗಿದ್ದು, ಆರ್ಥಿಕವಾಗಿ ಎಲ್ಲರನ್ನು ಸದೃಢಗೊಳಿಸುವ ಮೂಲಕ ರೈತರ ಆತ್ಮಹತ್ಯೆ ತಡೆಯುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಲ್ಲದೇ, ರೈತರ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.