ಬೆಂಗಳೂರು : ಒಡಿಶಾ ಶಾಸಕರಿರುವ ಬಿಡದಿ ರೆಸಾರ್ಟ್‌ನಲ್ಲಿಯೇ ಆಪರೇಷನ್ ಕಮಲ ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ರಾಜ್ಯಸಭೆ ಚುನಾವಣೆ ವೇಳೆ ಆಪರೇಷನ್ ಕಮಲ ಭೀತಿ ಹಿನ್ನೆಲೆಯಲ್ಲಿ ಒಡಿಶಾದ 8 ಮಂದಿ ಶಾಸಕರನ್ನು ಬಿಡದಿ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ರೆಸಾರ್ಟ್ಗೆ ಬಂದ ಅನಾಮಿಕರು ಶಾಸಕರಿಗೆ ಕೋಟಿ ಕೋಟಿ ಆಫರ್ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.
ಒಡಿಶಾ ಕಾಂಗ್ರೆಸ್ ಶಾಸಕ ಖರೀದಿ ಆರೋಪದ ಬಗ್ಗೆ ಬೆಂಗಳೂರಿನಲ್ಲಿ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಒಡಿಶಾ ಶಾಸಕರು ರೆಸಾರ್ಟ್ನಲ್ಲಿ ಇದ್ದರು. ಅದೇ ರೆಸಾರ್ಟ್ನಲ್ಲಿ ಬ್ಯಾಟರಾಯನಪುರ ಸುರೇಶ್ ಎಂಬುವವನ ಮೂಲಕ ಬಿಜೆಪಿಯವರು ರೂಮ್ ಬುಕ್ ಮಾಡಿ ಉಳಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಐದು ಕೋಟಿ ಆಫರ್ ಕೊಟ್ಟು ನಮ್ಮ ಪಕ್ಷದ ಒಡಿಶಾ MLAಯನ್ನು ಮೀಟ್ ಆಗಿದ್ದಾರೆ. ಆದ್ರೆ ಅವರ ಕುದುರೆ ವ್ಯಾಪಾರಕ್ಕೆ ನಮ್ಮ ಎಂಎಲ್ಎ ಒಪ್ಪಿಲ್ಲ. ಆಮಿಷವೊಡ್ಡಲು ಬಂದಿದ್ದವರಲ್ಲಿ ಒಟ್ಟು ನಾಲ್ಕು ಜನರಿದ್ದರು, ಇಬ್ಬರನ್ನು ನಮ್ಮವರು ಹಿಡಿದಿದ್ದಾರೆ. ಬ್ಲಾಂಕ್ ಚೆಕ್ ಸಮೇತ ಸಿಕ್ಕಿಬಿದ್ದಿದ್ದು, ಈ ಸಂಬಂಧ ಪೊಲೀಸರಿಗೂ ದೂರು ನೀಡಲಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ತೇವೆ ಎಂದು ಡಿಕೆಶಿ ತಿಳಿಸಿದ್ದಾರೆ.
ಇದನ್ನೂ ಓದಿ : ಚೀಟಿ ಹೆಸರಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ಪರಾರಿಯಾಗಿದ್ದ ಆರೋಪಿ ಅರೆಸ್ಟ್!



















