ಬೆಂಗಳೂರು : ಸಚಿವರು, ಶಾಸಕರೊಂದಿಗೆ ಸಿಎಂ ಸಭೆ ನಡೆಸುತ್ತಿರುವ ವಿಚಾರಕ್ಕೆ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮರೊಂದಿಗೆ ಮಾತನಾಡಿದ ಅವರು ಸಿಎಂ ಬೀದರ್ ಜಿಲ್ಲೆಯ ಶಾಸಕರ ಸಭೆ ಕರೆದಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಧನೆಗಳು, ಜಿಲ್ಲೆಯ ಬೇಡಿಕೆಗೆಳು, ಸಮಸ್ಯೆಗಳಿಗೆ ತುರ್ತಾಗಿ ಸ್ಪಂದನೆ ಮಾಡಬೇಕಾಗಿದೆ. ಬೀದರ್‌ನಲ್ಲಿ ನೀರಾವರಿ, ಶಿಕ್ಷಣ, ಆರೊಗ್ಯ, ಉದ್ಯೋಗ ,ಮಹಿಳಾ ಸಬಲೀಕರಣ, ಅನುಭವ ಮಂಟಪ ಪೂರ್ಣಗೊಳಿಸಬೇಕಿದೆ. ಎರಡು ಮುಕ್ಕಾಲು ವರ್ಷದಲ್ಲಿ ಇನ್ನೂ ಹಲವು ಭರವಸೆ ಇಡೇರಿಸಿಬೇಕಿದೆ ಎಂದವರು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಮಾಡುವುದಕ್ಕೆ ಸಿಎಂ ಸಹಕಾರ ಕೋರುತ್ತೇವೆ. ಬೀದರ್ ಬಗ್ಗೆ ಸಿಎಂ ಅಭಿಮಾನ ಇದೆ. ಜಿಲ್ಲೆಯ ಬೇಡಿಕೆ ಇಡೇರಿಸುತ್ತಾರೆ. ಜಿಲ್ಲೆಯ ಎಲ್ಲಾ ಬೇಡಿಕೆ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಇನ್ನು, ಇದೇ ವೇಳೆ ಬಿಜೆಪಿ, ಜೆಡಿಎಸ್ ಶಾಸಕರನ್ನು ಸಿಎಂ ಸಭೆ ಕರೆದಿಲ್ಲಾ ಎಂಬ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುತ್ತಾರೆ. ಬೀದರ್ ಜಿಲ್ಲೆ ಅಭಿವೃದ್ಧಿ ಆದರೆ ಎಲ್ಲರ ಅಭಿವೃದ್ಧಿ ಆಗುತ್ತದೆ. ಅಧಿವೇಶನದಲ್ಲಿ ವಿರೋಧ ಪಕ್ಷದವರು ಚರ್ಚೆ ಮಾಡಲಿ, ಅನುದಾನ ಕೊಡುತ್ತಾರೆ, ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ವಿರೋಧ ಪಕ್ಷದವರು ಹೊಟ್ಟೆಕಿಚ್ಚಿನಿಂದ ಮಾತನಾಡುತ್ತಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.