ಬೆಂಗಳೂರು : ಕಾಂಗ್ರೆಸ್ ಶಾಸಕರಿಗೆ ಸೀಮಿತವಾಗಿ ಅನುದಾನ ಹಂಚಿಕೆ, ಅಭಿವೃದ್ಧಿ ಕಾಮಗಾರಿಗಳ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ನಡೆಗೆ ಬಿಜೆಪಿ ಅಸಮಧಾನ ಹೊರ ಹಾಕಿದೆ.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಮಾತ್ರ ಮುಖ್ಯಮಂತ್ರಿಗಳಾ ಅಥವಾ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಗಳಾ ? ಎಂದು ಬಿಜೆಪಿ ಪ್ರಶ್ನಿಸಿದ್ದಲ್ಲದೇ, ಕಾಂಗ್ರೆಸ್ ಹೈಕಮಾಂಡ್ ಹೇಳಿದೆ ಎಂಬ ಕಾರಣಕ್ಕೆ ಅವರ ಪಕ್ಷದ ಶಾಸಕರನ್ನು ಮಾತ್ರ ಕರೆದು 50 ಕೋಟಿ ರೂ. ಅನುದಾನ ನೀಡುವುದಾದರೇ, ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರು ಎಲ್ಲಿಗೆ ಹೋಗಬೇಕು ಎಂದು ಬಿಜೆಪಿ ಪ್ರಶ್ನಿಸಿದೆ.
ಮಾಜಿ ಸಚಿವ ಸಿ.ಸಿ ಪಾಟೀಲ್, ಸಿಎಂ ಸಿದ್ದರಾಮಯ್ಯ ಅವರು ಎಡಗೈಯಲ್ಲಾದರೂ ಆಶೀರ್ವಾದ ಮಾಡಲಿ ಎಂದು ವ್ಯಂಗ್ಯವಾಡಿದರೇ, ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, ಸಿಎಂ ಸಿದ್ದರಾಮಯ್ಯ ಒಬ್ಬ ಪಕ್ಷಪಾತಿ ಎಂದು ಜರೆದರು. ಇನ್ನು ಮಾಜಿ ಡಿಸಿಎಂ ಡಾ. ಸಿ ಅಶ್ವಥ್ ನಾರಾಯಣ್, ಅಧಿಕಾರ ದುರ್ಬಳಕೆ ಮಾಡದೇ ಎಲ್ಲರಿಗೂ ಸರಿಯಾಗಿ ಸ್ಪಂದಿಸಲಿ ಎಂದು ಹೇಳಿದ್ದಾರೆ.