ದಾವಣಗೆರೆ : ಬಿಜೆಪಿ ರಾಜ್ಯಧ್ಯಕ್ಷರ ಬದಲಾವಣೆ ಇನ್ನೂ ಕನ್ನಡಿಯೋಳಗಿನ ಕಗ್ಗಂಟಾಗಿ ಹೈಕಮಾಂಡ್ ಗೆ ಪರಿಣಮಿಸಿದೆ. ನಾಯಕತ್ವದ ಬಗ್ಗೆ ಅಸಮಧಾನ ಇನ್ನೂ ಶಮನಗೊಂಡಿಲ್ಲ. ಈ ನಡುವೆ ತಟಸ್ಥ ಬಣ ದಾವಣಗೆರೆಯಲ್ಲಿ ಸೇರಿದ್ದು ಈಗ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ದಾವಣಗೆರೆಯಲ್ಲಿ ಬಿಜೆಪಿ ರೆಬೆಲ್ಸ್ ಟೀಮ್ ಸಮಾಗಮವಾಗಿದ್ದು, ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನ ಕಾರ್ಯಕ್ರಮಕ್ಕೆ ತಟಸ್ಥ ನಾಯಕರು ಆಗಮಿಸಿದ್ದಾರೆ. ದಾವಣಗೆರೆಯಲ್ಲಿ ಒಟ್ಟಾಗಿ ಬೆಣ್ಣೆ ದೋಸೆ ಸವಿದಿದ್ದಾರೆ. ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಬಿ.ವಿ.ನಾಯಕ್, ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ದಾವಣಗೆರೆಯ ವಸಂತ ಹೋಟೆಲ್‌ನಲ್ಲಿ ಬೆಣ್ಣೆ ದೋಸೆ ಸವಿದು ಬಿಜೆಪಿ ರಾಜ್ಯ ಘಟಕದ ನಾಯಕತ್ವದ ಬಗ್ಗೆ ಚರ್ಚಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

















