ಹುಬ್ಬಳ್ಳಿ: ಬಿಜೆಪಿಗೆ ರಾಜಕೀಯ ಬಿಟ್ಟರೆ ಬೇರೆ ಬೇಕಾಗಿಲ್ಲ. ಹೀಗಾಗಿ ಅವರು ಪ್ರತಿಯೊಂದು ವಿಚಾರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀಗಾಗಿ ಬಿಜೆಪಿಗೆ ಅಭಿವೃದ್ಧಿಯ ಚರ್ಚೆಗಳು ಬೇಕಾಗಿಲ್ಲ. ಉತ್ತರ ಕರ್ನಾಟಕದ ಕುರಿತು ಚರ್ಚೆಗೆ ಅದು ಮನಸ್ಸು ಮಾಡುತ್ತಿಲ್ಲ. ಬಿಜೆಪಿಯಲ್ಲೇ ಒಗ್ಗಟ್ಟು ಇಲ್ಲ. ಅವರೇನೇ ಚರ್ಚೆ ಮಾಡಿದರೂ ನಾವು ಎಲ್ಲದಕ್ಕೂ ರೆಡಿ ಇದ್ದೇವೆ. ಮಹದಾಯಿ ವಿಚಾರವಾಗಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೇನೆ. ನಮ್ಮಲ್ಲಿ ಪ್ಲ್ಯಾನ್ ಸಿದ್ಧವಿದೆ. ಅವರು ಅನುಮತಿ ಕೊಟ್ಟರೆ ಭೇಟಿಯಾಗುತ್ತೇನೆ ಎಂದಿದ್ದಾರೆ.
ಮಹಾದಾಯಿ ವಿಚಾರದಲ್ಲಿ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿ ಇಬ್ಬರು ಜವಾಬ್ದಾರಿ ತೆಗೆದುಕೊಳ್ಳಬೇಕು. ಮಹದಾಯಿ ಸಂಭ್ರಮಾಚರಣೆ ಮಾಡಿದ್ದು ಅವರು. ಹೀಗಾಗಿ ಅವರ ನೇತೃತ್ವದಲ್ಲೇ ಕೆಲಸ ಮಾಡಬೇಕು. ಅವರಿಂದಾಗಿ ಅರಣ್ಯ ಅನುಮತಿ ಸಿಗುವ ಸಾಧ್ಯತೆ ಇದೆ ಎಂದಿದ್ದಾರೆ.