ಯಾದಗಿರಿ : ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ವಿಚಾರವನ್ನು ಹಲವರು ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ಮಾತನಾಡಿದ್ದು, ಬಿಜೆಪಿಯವರಿಗೆ ಮಾತನಾಡಲು ಬೇರೆ ಕೆಲಸವಿಲ್ಲ. ಅಭಿವೃದ್ಧಿ, ರೈತರಿಗೆ ತೊಂದರೆ, ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲ ಅಂತ ಅವರು ಒಮ್ಮೆಯೂ ಮಾತನಾಡಿಲ್ಲ. ಆಯ್ಕೆ ಮಾಡುವ ಹಕ್ಕು ಸರ್ಕಾರಕ್ಕೆ ಇದೆಯಲ್ಲವಾ? ಎಂದು ಪ್ರಶ್ನಿಸಿದ್ದಾರೆ.
ಆಯ್ಕೆ ಮಾಡುವುದು ಸರ್ಕಾರದ ಕೆಲಸ. ಯಧುವೀರ ಅವರೇ ಬಿಜೆಪಿಯವರ ಮುಖಕ್ಕೆ ಕ್ಯಾಕರಿಸಿ ಉಗುಳಿದ್ದಾರಲ್ವಾ? ಪ್ರಸೆಂಟ್ ಬಿಜೆಪಿ ಎಂಪಿ, ರಾಜಮನೆತನದವರೇ ಉಗುಳಿದ ಮೇಲೆ ಬಿಜೆಪಿಯ ಮರ್ಯಾದೆ ಇನ್ನೆಲ್ಲಿ ಉಳಿಯಿತು ಎಂದು ಪ್ರಶ್ನಿಸಿದ್ದಾರೆ.