ಬೆಂಗಳೂರು: ಬಿಜೆಪಿಯಲ್ಲಿ ಬಣಗಳ ಗುದ್ದಾಟ, ರಾಮುಲು-ರೆಡ್ಡಿ ಸಂಘರ್, ಜೋರಾಗಿದೆ. ಇದು ಪಕ್ಷದ ಮುಜುಗರಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿರುವ ಆರೆಸ್ಸೆಸ್, ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡುತ್ತಿದೆ.
ಜಿ.ವಿ. ರಾಜೇಶ್ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ನೇಮಕಕ್ಕೆ ಈಗ ಆರೆಸ್ಸೆಸ್ ಮುಂದಾಗಿದೆ. ಕಳೆದ ಒಂದು ವರ್ಷದಿಂದಲೂ ತೆರವಾಗಿದ್ದ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಿರಲಿಲ್ಲ.
ಈಗ ನೇಮಕ ಮಾಡಲು ಆರೆಸ್ಸೆಸ್ ಮುಂದಾಗಿದೆ. ಬಿಜೆಪಿಯಲ್ಲಿ ಕಚ್ಚಾಟ ಹೆಚ್ಚಾಗುತ್ತಿದ್ದಂತೆ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ನೇಮಕ ಮಾಡಲು ಹೈಕಮಾಂಡ್ ಮುಂದಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಬಳಿ ಹೇಳಲು ಸಾಧ್ಯವಾಗದ ದೂರನ್ನು ಸಂಘಟನಾ ಕಾರ್ಯದರ್ಶಿ ಹತ್ತಿರ ಹೇಳಿ ಪರಿಸ್ತಿತಿ ತಿಳಿಗೊಳಿಸಲು ಯತ್ನಿಸುವಂತೆ ಸೂಚಿಸಲಾಗಿದೆ.
ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ. ರಾಜೇಶ್ ಅವರನ್ನು ದಿಢೀರ್ ಎತ್ತಂಗಡಿ ಮಾಡಿ ರಾಷ್ಟ್ರೀಯ ಸ್ವಯಸೇವಕ ಸಂಘದ ಸಹ ಸಂಸ್ಥೆ ‘ಸಾಮರಸ್ಯ’ದ ಹೊಣೆಯನ್ನು ನೀಡಲಾಗಿತ್ತು. ಪ್ರಚಾರಕ ಹುದ್ದೆಯಿಂದ ಸಂಘಟನಾ ಕಾರ್ಯದರ್ಶಿಯಂತಹ ಅತ್ಯಂತ ಜವಾಬ್ದಾರಿಯ, ಮಹತ್ವದ ಹುದ್ದೆಗೆ ಬಂದವರ ಅವಧಿ ಸಾಮಾನ್ಯವಾಗಿ ಮೂರು ವರ್ಷ ಇರುತ್ತದೆ. ಆದರೆ, ರಾಜೇಸ್ ಅವರನ್ನು ಅವಧಿಗೂ ಮುನ್ನವೇ ಬದಲಾಯಿಸಲಾಗಿತ್ತು. ಇದು ಚರ್ಚೆಗೂ ಕಾರಣವಾಗಿತ್ತು. ಈಗ ಸಂಘಟನಾ ಕಾರ್ಯದರ್ಶಿ ನೇಮಕ ಮಾಡಿ, ಪಕ್ಷದ ಆಂತರಿಕ ಕಿತ್ತಾಟ ಸರಿ ಮಾಡಲು ಪಕ್ಷ ಮುಂದಾಗಿದೆ.