ಬೆಂಗಳೂರು : ವಿಧಾನ ಸೌಧದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಖಾಸಗಿ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಕೂತು ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನ ದೂರುತಿದ್ದಾರೆ ಎಂದು ಮೋಹನ್ ದಾಸ್ ಫೈ ಹಾಗೂ ತೇಜಸ್ವೀ ಸೂರ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಖಾಸಗಿಯವರಿಗೆ ಮನ್ನಣೆ ಕೊಡಲು ನೋ ಮೋರ್ ಬಿಎಂಟಿಸಿ, ಅನ್ನೋ ಸ್ಲೋಗನ್ ಕಾರ್ಯಕ್ರಮವನ್ನ ಬೆಂಬಲಿಸುತ್ತಾರೆ. ಇವರ ಈ ನಡೆ, ಬಡವ,ದಲಿತ ಹಾಗೂ ಮಹಿಳೆಯರ ವಿರೋಧದ ಕಡೆಗೆ. ಮಹಿಳಾ ಸಬಲೀಕರಣಕ್ಕೆ ಹಾಕಿಕೊಂಡ ಕಾರ್ಯಕ್ರಮವನ್ನ ಕೇವಲವಾಗಿ ನೋಡ್ತಿದ್ದು, ಲಾಭ ಬಯಸುವ ಖಾಸಗಿಯವರನ್ನ ಬೆಂಬಲಿಸಲು ಇವರು ಮುಂದಾಗಿದ್ದಾರೆ. ಟ್ವೀಟ್ ಮಾಡೋದ್ರಲ್ಲಿ ಮುಂದಿರೋ ಬಿಜೆಪಿಯವರು ಇದನ್ನ ಬಿಟ್ಟುಬೇರೆ ಸಾಧನೆ ಇಲ್ಲ. ಈ ರೀತಿ ಚಿಂತನೆ ಮಾಡೋ ಇವರು ಆಘಾತಕಾರಿ ಹಾಗೂ ವಿನಾಶಕಾರಿ ಚಿಂತನೆ ಎಂದು ಆಕ್ರೋಶಿಸಿದ್ದಾರೆ.
ನಮ್ಮ ಇಲಾಖೆ ಮತ್ತು ಅದರ ಕಾರ್ಯವೈಖರ ನೋಡಿ ಬಿಜೆಪಿಯವರು ಮಾತನಾಡಬೇಕು. ಇವರೆಲ್ಲ ಮಾತನಾಡಿ ಸಾರ್ವಜನಿಕ ಸಾರಿಗೆ ಕಡಿಮೆ ಇರೋ ಇತರೆ ರಾಜ್ಯಗಳಿಗೆ ಹೆಚ್ಚಿನ ಬಸ್ ಕೊಡಿಸುವ ಪಿಎಂಗೆ ಮನವಿ ಮಾಡಲಿ. ಮೋಹನ್ ದಾಸ್ ಪೈ ಹಾಗೂ ತೇಜಸ್ವೀ ಸೂರ್ಯ ಅವರದ್ದು ಮನೆಗೆ ಮಾರಿ ಪರರಿಗೆ ಉಪಕಾರಿಯಂತಿರುವವರು ಎಂದು ಕಿಡಿಕಾರಿದ್ದಾರೆ.
“ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ ವಿಚಾರ”
ರಸ್ತೆಯಲ್ಲಿ ಗುಂಡಿಗಳಾದು ಸಹಜ, ಅದನ್ನ ನೋಡಿಕೊಳ್ಳೋದು ಮಹಾನಗರ ಪಾಲಿಕೆ ಕೆಲಸ. ಸಿಎಂ, ಡಿಸಿಎಂ, ನಿರ್ದೇಶನ ನೀಡಿದ ಮೇಲೆ ಗುಂಡಿ ಮುಚ್ಚೋ ಕೆಲಸ ಮಾಡ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲೂ ಈ ಸಮಸ್ಯೆ ಎದುರಾಗಿತ್ತು. ಎಲ್ಲರ ಅವಧಿಯಲ್ಲೂ ಹೀಗಿರತ್ತೆ ಮಳೆ ಬಂದಾಗ ಈ ಸಮಸ್ಯೆ ಸಹಜ, ಇದನ್ನ ಜಾಗರೂಕತೆಯಿಂದ ನಮ್ಮವರು ನೋಡಿಕೊಳ್ಳುತ್ತಿದ್ದೇವೆ. ಮೋಹನ್ ದಾಸ್ ಪೈ ಹಾಗೂ ಮಂಜುಂದಾರ್ ಅವರು ಮಾತ್ರ ಉಧ್ಯಮಿಗಳಲ್ಲ ಬೇರೆಯವರೂ ಇದ್ದಾರೆ. ಇವರು ಜವಾಬ್ದಾರಿ ಇರೋ ಜನ. ಎಲ್ಲರ ತಪ್ಪನ್ನೂ ಹೇಳಬೇಕು. ಬರೀ ನಮ್ಮ ಸರ್ಕಾರದ ಬಗ್ಗೆ ಮಾತ್ರ ಮಾತನಾಡೋದು ಸರಿಯಲ್ಲ ಅಷ್ಟೆ ಎಂದು ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ದ ಮಾತನಾಡಿದ್ದಾರೆ.



















