ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಇಂದು 37ನೇ ಹುಟ್ಟುಹಬ್ಬದ ಸಂಭ್ರಮ. ಕಿಂಗ್ ಕೊಹ್ಲಿ ಹುಟ್ಟುಹಬ್ಬದ ಅಂಗವಾಗಿ ಹಿರಿಯ ಕ್ರಿಕೆಟಿಗರು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ ಸೇರಿದಂತೆ ಅನೇಕ ಅಭಿಮಾನಿಗಳು ಶುಭ ಕೋರಿದ್ದಾರೆ.

ಭಾರತೀಯ ಕ್ರಿಕೆಟ್ ಪ್ರೇಮಿಗಳು ಸಚಿನ್ ತೆಂಡೂಲ್ಕರ್ ಬಹಳ ಪ್ರೀತಿಯಿಂದ ಒಪ್ಪಿಕೊಂಡ ಆಟಗಾರನೊಬ್ಬನಿದ್ದರೆ ಅದು ಖಂಡಿತವಾಗಿಯೂ ವಿರಾಟ್ ಕೊಹ್ಲಿ. ಇಂದು ಅವರು ಒಬ್ಬ ಸ್ಟಾರ್ ಮಾತ್ರವಲ್ಲ, ಒಂದು ಬ್ರಾಂಡ್ ಆಗಿ ಬೆಳೆದಿದ್ದಾರೆ. ಭಾರತ ತಂಡ ಇರಬಹುದು ಇಲ್ಲಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಇರಬಹುದು ಅವರು ಮೈದಾನದಲ್ಲಿದ್ದಾರೆಂದಾದಲ್ಲಿ ಆ ಲವಲವಿಕೆಯೇ ಬೇರೆ. ಇದೀಗ 37ರ ಹರೆಯಕ್ಕೆ ಕಾಲಿಟ್ಟಿರುವ ಅವರ ಪ್ರಮುಖ ಕ್ರಿಕೆಟ್ ಸಾಧನೆಗಳ, ದಾಖಲೆಗಳ ಬಗ್ಗೆ ಒಂದು ಇಣುಕುನೋಟ.
ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬಿಸಿಸಿಐ ಟ್ವೀಟ್ ಮಾಡಿದೆ. ವಿಶ್ವ ಕ್ರಿಕೆಟ್‌ನ ಅತ್ಯಂತ ನಿರ್ಭೀತ ಆಟಗಾರರಲ್ಲಿ ಒಬ್ಬರಾದ ‘ನಮ್ಮ ವಿರಾಟ ರಾಜ’ನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ.

ಕಿಂಗ್ ಕೊಹ್ಲಿಗೆ 37 ವರ್ಷ! ಭಾರತೀಯ ಕ್ರಿಕೆಟ್‌ನ ನಿಜವಾದ ದಂತಕಥೆ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರಯಾಣವನ್ನು ಆಚರಿಸಲಾಗುತ್ತಿದೆ! ಅವರಿಗೆ ಹೆಚ್ಚಿನ ದಾಖಲೆಗಳು, ವಿಜಯಗಳು ಮತ್ತು ಸಂತೋಷದಿಂದ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ! ಜನ್ಮದಿನದ ಶುಭಾಶಯಗಳು ವಿರಾಟ್ ಕೊಹ್ಲಿ ಎಂದು ಮಾಜಿ ಆಟಗಾರ ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ 3 ಹುದ್ದೆಗಳ ನೇಮಕ : ಕರ್ನಾಟಕದಲ್ಲೇ ಉದ್ಯೋಗ


















