ಬೆಂಗಳೂರು: ಶಾಂತಿನಗರದಲ್ಲಿ ಬೈಕ್ ಸವಾರನ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್ ಗಾರ್ಡನ್ ಪೊಲೀಸರು ಮೂವರ ಆರೋಪಿಗಳನ್ನು ಬಂಧಿಸಿದ್ದಾರೆ.
ಲಕ್ಕಸಂದ್ರ ನಿವಾಸಿಗಳಾದ ಶರವಣ್, ಸೋನು, ವಿಕ್ರಮ್ ಬಂಧಿತ ಆರೋಪಿಗಳು. ಶಾಂತಿನಗರದ ಚರ್ಚ್ ರಸ್ತೆಯ ನಿವಾಸಿ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಲಾಂಗ್ ತೋರಿಸಿ 7 ಸಾವಿರ ಸುಲಿಗೆ ಮಾಡಿ ಪರಾರಿಯಾಗಿದ್ದರು. ಸದ್ಯ ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿಗಳನ್ನು ಬಂಧಿಸಿ ತನಿಎ ನಡೆಸುತ್ತಿದ್ದಾರೆ.
ಈ ಘಟನಾ ಸಂಧಂದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಾಡಿದ್ದ ಸಾಲ ತೀರಿಸಲು ಖದೀಮರ ಮಾಸ್ಟರ್ ಪ್ಲ್ಯಾನ್ | ಖಾಕಿ ತನಿಖೆ ವೇಳೆ ಬಯಲಾಯ್ತು 7.11 ಕೋಟಿ ದರೋಡೆಯ ಗುಟ್ಟು



















