ಬೆಂಗಳೂರು : ಕಾರು ಮತ್ತು ಕಂಟೇನರ್ ನಡುವೆ ಬೈಕ್ ಚಲಾಯಿಸಿದ್ದು, ಬೈಕ್ ನಲ್ಲಿದ್ದ ಅಮ್ಮ ಮತ್ತು ಮಗ ರಸ್ತೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮೈಸೂರು ರಸ್ತೆಯ ಜುಡಿಯೋ ಎದುರು ನಡೆದಿದೆ.
ಅಶ್ವಿನಿ, ಅಭಿಲಾಶ್, ಮೃತ ತಾಯಿ, ಮಗ. ಇಂದು ಬೆಳಗ್ಗೆ 7.30 ಕ್ಕೆ ಮೈಸೂರು ರಸ್ತೆಯಿಂದ ಮಾರ್ಕೆಟ್ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ಮತ್ತು ಕಂಟೇನರ್ ಮಧ್ಯೆದಲ್ಲಿ ಬೈಕ್ ಚಲಾಯಿಸಿದ್ದು, ಕಂಟೇನರ್‌ಗೆ ಟಚ್ ಆಗಿ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ರಭಸಕ್ಕೆ ಇಬ್ಬರ ತಲೆಗೆ ತೀವ್ರ ಪೆಟ್ಟಾಗಿದ್ದು, ಕೆಲವೇ ಕ್ಷಣದಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ.
ಸದ್ಯ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ : ಐಪಿಎಲ್‌ಗೆ ಫಾಫ್ ಡು ಪ್ಲೆಸಿಸ್ ‘ಬ್ರೇಕ್’ ; ಪಿಎಸ್‌ಎಲ್‌ನಲ್ಲಿ ಆಡಲು ನಿರ್ಧಾರ



















