ಬೆಂಗಳೂರು: ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದ್ದು, ಆದೇಶ ಉಲ್ಲಂಘಿಸಿದ ವಾಹನಗಳನ್ನು ಕಾರ್ಯಾಚರಣೆ ನಡೆಸಿ ಸೀಜ್ ಮಾಡಲಾಗಿದೆ.
ಕೋರ್ಟ್ ಆದೇಶದ ಬೆನ್ನಲ್ಲೇ ಆರ್ಟಿಓ (RTO) ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ. ಸೋಮವಾರ ಒಂದೇ ದಿನ ಬರೋಬ್ಬರಿ 100ಕ್ಕೂ ಅಧಿಕ ಬೈಕ್ ಗಳನ್ನು ಸೀಜ್ ಮಾಡಿದ್ದಾರೆ. ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಜೂ.16ರಿಂದ ಅನಧಿಕೃತ ಬೈಕ್ ಟ್ಯಾಕ್ಸಿಗಳು ಸ್ಥಗಿತಗೊಂಡಿವೆ.
ಹೀಗಾಗಿ ಆರ್ಟಿಓ ಅಧಿಕಾರಿಗಳು ಅನಧಿಕೃತ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದಾರೆ. 11 ಆರ್ಟಿಓ ವ್ಯಾಪ್ತಿಯಲ್ಲಿ ಚಲಾಯಿಸುತ್ತಿದ್ದ ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಲಾಗಿದೆ.
ಸೀಜ್ ಆಗಿರುವ ಬೈಕ್ ಗಳು
1.ಆರ್ಟಿಓ ಸೆಂಟ್ರಲ್ – 8
2.ಆರ್ಟಿಓ ವೆಸ್ಟ್ – 16
3.ಆರ್ಟಿಓ ಈಸ್ಟ್ – 12
4.ಆರ್ಟಿಓ ನಾರ್ತ್ – 10
5.ಆರ್ಟಿಓ ಸೌತ್ – 10
6.ಜ್ಞಾನಭಾರತಿ – 5
7.ದೇವನಹಳ್ಳಿ – 5
8.ಯಲಹಂಕ. – 4
9.ಲೆಕ್ಟ್ರಾನಿಕ್ ಸಿಟಿ – 15
10.ಕೆ.ಆರ್.ಪುರಂ – 13
11.ಚಂದಾಪುರ – 5