ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಎಗರಿಸಿ ಖದೀಮರು ಪರಾರಿಯಾಗಿರುವ ಘಟನೆಯೊಂದು ವೈರಲ್ ಆಗಿದೆ.
ಮನೆ ಗೇಟ್ ಮುಂದೆ ಪಾರ್ಕ್ ಮಾಡಿದ್ದ ಬೈಕ್ ನ್ನು ಖದೀಮ ಎಗರಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಜ. 19ರಂದು ಬೆಳಗ್ಗೆ 6.30ರ ವೇಳೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯಲಹಂಕ ಓಲ್ಡ್ ಟೌನ್ ನ ಗಾಂಧಿ ನಗರದಲ್ಲಿ ಈ ಘಟನೆ ನಡೆದಿದ್ದು, ಖದೀಮರಿಬ್ಬರು ಮನೆಯ ಬಳಿ ಬಂದು ಬೈಕ್ ಹ್ಯಾಂಡಲ್ ಲಾಕ್ ಗಮನಿಸಿದ್ದಾರೆ. ಅದು ಲಾಕ್ ಗಿರುವುದು ಗೊತ್ತಾಗುತ್ತಿದ್ದಂತೆ ಯಾರೂ ಇಲ್ಲದನ್ನು ಗಮನಿಸಿ ಬೈಕ್ ಮೇಲೆ ಕುಳಿತಂತೆ ಮಾಡಿ ರಾಜರೋಷವಾಗಿ ಹ್ಯಾಂಡಲ್ ಲಾಕ್ ಮುರಿದು ಡಿಯೋ ಕಳ್ಳತನ ಮಾಡಿದ್ದಾರೆ. ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿಟಿವಿಯಲ್ಲಿ ಖದೀಮರ ಕೈ ಚಳಕ ಪತ್ತೆಯಾಗಿದೆ. ಆರೋಪಿಗಳಿಗಾಗಿ ಈಗ ಪೊಲೀಸರು ಬಲೆ ಬೀಸಿದ್ದಾರೆ.