ಪಾಟ್ನಾ : ಬಿಹಾರದಲ್ಲಿ 2 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆದಿದ್ದರೆ, ಎರಡನೇ ಹಂತದ ಮತದಾನ ಇಂದು ಮುಕ್ತಾಯವಾಗಿದೆ. ಈ ಬಾರಿ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು.
ಇದರಲ್ಲಿ ಯಾವ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಕಲ್ಪನೆಯನ್ನು ನೀಡಲು ಚನಾವಣೋತ್ತರ ಸಮೀಕ್ಷೆಗಳು ಸಹಾಯ ಮಾಡುತ್ತವೆ. ಎಕ್ಸಿಟ್ ಪೋಲ್ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಸಿಗಬಹುದು ಎಂದು ಲೆಕ್ಕಾಚಾರ ಹಾಕಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಬಿಹಾರದಲ್ಲಿ ಮೊದಲ ಹಂತದಲ್ಲಿ, 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಎರಡನೇ ಹಂತದಲ್ಲಿ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯಿತು. ಚುನಾವಣಾ ಫಲಿತಾಂಶ ನವೆಂಬರ್ 14ರಂದು ಹೊರಬೀಳಲಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಈ ಬಾರಿ ಸ್ಪಷ್ಟ ಮುನ್ನಡೆಯನ್ನು ಸಾಧಿಸಲಿವೆ ಎಂದು ಭವಿಷ್ಯ ನುಡಿದಿವೆ. ತೀವ್ರ ಪೈಪೋಟಿಯಿಂದ ಕೂಡಿರುವ ಈ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಬಣ ಎನ್‌ಡಿಎಗಿಂತ ಹಿಂದುಳಿದಿದೆ.
ಯಾವ ಸಮೀಕ್ಷೆ ಏನು ಹೇಳಿದೆ?
ಪೀಪಲ್ಸ್ ಪಲ್ಸ್ ಸಮೀಕ್ಷೆ |
ಎನ್ಡಿಎ: 133-159 ಮಹಾಘಟಬಂಧನ್: 75-101 ಜನ್ ಸುರಾಜ್: 0-5 ಇತರರು: 2-8
ಪೀಪಲ್ಸ್ ಇನ್‌ಸೈಟ್ ಸಮೀಕ್ಷೆ |
ಎನ್ಡಿಎ: 133-148
ಮಹಾಘಟಬಂಧನ್: 87-102
ಮ್ಯಾಟ್ರಿಜ್ ಸಮೀಕ್ಷೆ |
ಎನ್ಡಿಎ: 147-167
ಮಹಾಘಟಬಂಧನ್: 70-90
ಜೆವಿಸಿ ಸಮೀಕ್ಷೆ |
ಎನ್ಡಿಎ: 135-140
ಮಹಾಘಟಬಂಧನ್: 88-103
ಭಾಸ್ಕರ್ ಬಿಹಾರ ಸಮೀಕ್ಷೆ |
ಎನ್ಡಿಎ: 145-160
ಮಹಾಘಟಬಂಧನ್: 73-91
ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆ |
ಎನ್ಡಿಎ: 130-138
ಮಹಾಘಟಬಂಧನ್: 100-108
ಇತರರು: 3-5
ಇದನ್ನೂ ಓದಿ : ಸ್ಫೋಟದಲ್ಲಿ ಭಾಗಿಯಾದ ಪ್ರತಿಯೊಬ್ಬನನ್ನು ಬೇಟೆಯಾಡಿ | ತನಿಖಾಧಿಕಾರಿಗಳಿಗೆ ಅಮಿತ್ ಶಾ ಖಡಕ್ ಸೂಚನೆ


















