ಬೆಂಗಳೂರು: ಜಾಲಿವುಡ್ ಸ್ಟೂಡಿಯೋಸ್‌ನಲ್ಲಿ ಬಿಗ್ ಬಾಸ್ ಶೋವನ್ನು ಕಾನೂನಿನ ನಿಯಮಗಳನ್ನು ಮೀರಿ ನಡೆಸುತ್ತಿದ್ದರಿಂದ ರಾಜ್ಯ ಸರ್ಕಾರ ಇದೀಗ ಮನೆಯನ್ನು ಕ್ಲೋಸ್ ಮಾಡಿಸಿದೆ. ಎಲ್ಲಾ ಸ್ಪರ್ಧಿಗಳನ್ನು ಸಂಜೆ 7 ಗಂಟೆಯೊಳಗೆ ಹೊರಗೆ ಕಳಿಸುವಂತೆ ಆದೇಶ ಹೊರಡಿಸಲಾಗಿತ್ತು. ಈ ಬೆನ್ನಲ್ಲೇ ಹಿಂಬದಿ ಗೇಟಿನಿಂದ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿದೆ.

ಸ್ಪರ್ಧಿಗಳನ್ನು ಕೂಡಲೇ ಮನೆಯಿಮದ ಹೊರಗೆ ಕಳುಹಿಸಿ, ಮನೆಯ ಲೈಟ್ಸ್ ಆಫ್ ಮಾಡಲಾಗಿದ್ದು, ಜಾಲಿವುಡ್ ಸ್ಟೂಡಿಯೋಸ್‌ನ 3 ಗೇಟುಗಳನ್ನು ರಾಮನಗರದ ತತಹಶೀಲ್ದಾರ್ ನೇತೃತ್ವದಲ್ಲಿ ಕ್ಲೋಸ್ ಮಾಡಲಾಗಿದೆ. ಸದ್ಯ 17 ಸ್ಪರ್ಧಿಗಳು ಕಿಚ್ಚ ಸುದೀಪ್ ವಾರಾಂತ್ಯದ ಕಾರ್ಯಕ್ರಮವನ್ನ ನಡೆಸಿಕೊಡುವ ಜಾಲಿವುಡ್ ಥಿಯೇಟರ್ ಆವರಣಕ್ಕೆ ಕರೆತಂದು ಕೂರಿಸಲಾಗಿದೆ ಎಂದು ತಿಳಿದುಬಂದಿದೆ.

ಅಂತಿಮವಾಗಿ ಬಿಗ್ ಬಾಸ್ ಸ್ಪರ್ಧಿಗಳು ಎಲ್ಲಿಗೆ ಹೋಗ್ತಾರೆ?
ಇನ್ನು ಬಿಗ್‌ಬಾಸ್ 17 ಸ್ಪರ್ಧಿಗಳನ್ನು ಬೇರೆ ಹೋಟೆಲ್ ಅಥವಾ ಖಾಸಗಿ ರೆಸಿಡೆನ್ಸಿಗೆ ಶಿಫ್ಟ್ ಮಾಡುವುದಕ್ಕೆ ಮುಂದಾಗಿದೆ. ಸ್ಪರ್ಧಿಗಳನ್ನು ಬೇರೆಡೆ ಶಿಫ್ಟ್ ಮಾಡುವುದಕ್ಕೆ ಒಟ್ಟು 10 ಇನ್ನೋವಾ ಕಾರುಗಳನ್ನು ತರಿಸಲಾಗಿದೆ. ಸ್ಪರ್ಧಿಗಳನ್ನು ಹೈಡ್ ಮಾಡಿ ಇಡುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಇದೀಗ ಜಾಲಿವುಡ್ ಸ್ಟೂಡಿಯೋಸ್‌ನ ಎ,ಬಿ, ಸಿ ಮೂರೂ ಗೇಟ್‌ಗಳು ಬೀಗ ಹಾಕಲಾಗಿದ್ದು, ಡಿ ಗೇಟ್ ಬಾಕಿಯಿದ್ದು, ಅಲ್ಲಿಂದ ಸ್ಪರ್ಧಿಗಳನ್ನು ಹೊರಗೆ ಕರೆತರುವ ಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ.
