ಬಿಗ್‌ಬಾಸ್ ಸೀಸನ್ 12ರ ಮೊದಲ ರನ್ನರ್‌ಅಪ್ ಆಗಿ ಜನಪ್ರಿಯತೆ ಗಳಿಸಿದ ರಕ್ಷಿತಾ ಶೆಟ್ಟಿಗೆ ಹುಟ್ಟೂರಿನಲ್ಲಿ ಅದ್ಧೂರಿ ರೋಡ್ ಶೋ ಮೂಲಕ ಸ್ವಾಗತ ಹಾಗೂ ಸನ್ಮಾನ ನಡೆಯಿತು. ಮಂಗಳೂರು–ಉಡುಪಿ ಜಿಲ್ಲೆಗಳ ಗಡಿಭಾಗದ ಹೆಜಮಾಡಿ ಟೋಲ್ ಬಳಿ ನೂರಾರು ಅಭಿಮಾನಿಗಳು ಸೇರಿ ಸಂಭ್ರಮದ ವಾತಾವರಣ ನಿರ್ಮಿಸಿದರು.
ಹೆಜಮಾಡಿ ಟೋಲ್‌ನಿಂದ ಪಡುಬಿದ್ರಿ ಪೇಟೆಯವರೆಗೆ ತೆರೆದ ವಾಹನದಲ್ಲಿ ರಕ್ಷಿತಾ ಶೆಟ್ಟಿಗೆ ಭವ್ಯ ಮೆರವಣಿಗೆ ನಡೆಸಲಾಗಿದ್ದು, ಅಭಿಮಾನಿಗಳ ಘೋಷಣೆ, ಹೂಮಾಲೆ ಹಾಗೂ ಶುಭಾಶಯಗಳ ನಡುವೆ ರಕ್ಷಿತಾ ಶೆಟ್ಟಿಗೆ ಗೌರವ ಸಲ್ಲಿಸಲಾಯಿತು.
ಹುಟ್ಟೂರಲ್ಲಿ ನಡೆದ ಈ ಸನ್ಮಾನ ಕಾರ್ಯಕ್ರಮಕ್ಕೆ ಭಾರಿ ಜನಸ್ತೋಮ ಸೇರಿದ್ದು, ರಕ್ಷಿತಾ ಶೆಟ್ಟಿ ಆಗಮನವನ್ನು ಅಭಿಮಾನಿಗಳು ಸಂಭ್ರಮ ಹಾಗೂ ಉತ್ಸಾಹದಿಂದ ಆಚರಿಸಿದರು.
ಇದನ್ನೂ ಓದಿ : ‘ಕಾಂತಾರ ಚಾಪ್ಟರ್-1’ ಜೀ ಕನ್ನಡದಲ್ಲಿ..!



















