‘ಬಿಗ್ ಬಾಸ್ ಸೀಸನ್-12’ ಮತ್ತೆ ಜಗಳಗಳ ಕೂಪವಾವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಯಾವಾಗಲೂ ಒಂದಲ್ಲ ಒಂದು ವಿವಾದಗಳಿಂದ ಸ್ಪರ್ಧಿಗಳು ಸುದ್ದಿಯಾಗುತ್ತ ಇರುತ್ತಾರೆ. ಈ ಸೀಸನ್-12 ಕೂಡ ಇದೇ ದಾರಿಯಲ್ಲಿದೆ. ಬಿಗ್ ಬಾಸ್ ಶುರುವಾದ ಎರಡೇ ದಿನಕ್ಕೆ ಮನೆಯೊಳಗೆ ‘ನಾನಾ ನೀನಾ’ ಎಂಬ ಕಾಂಪಿಟೇಷನ್ ಬಿಸಿ ಆರಂಭವಾಗಿದೆ. ಇದರ ಮಧ್ಯೆಯೇ ಬಿಗ್ ಬಾಸ್ ಹೊಸ ಭಯಾನಕ ಟ್ವಿಸ್ಟ್ ವೊಂದನ್ನು ನೀಡಿದೆ..!

‘ಬಿಗ್ ಬಾಸ್ ಸೀಸನ್-12’ ಶುರುವಾಗಿ 3 ದಿನಗಳು ಕಳೆದಿದೆ. ‘ಒಂಟಿ-ಜಂಟಿ’ ಟಾಸ್ಕ್ ಕೂಡ ಸಕತ್ತಾಗಿ ಸೌಂಡ್ ಮಾಡುತ್ತಿದೆ. ಒಂಟಿಗಳು ಮುಂದಿನ ಎಲಿಮಿನೆಷನ್ ಗಾಗಿ ಪ್ಲ್ಯಾನ್ ಮಾಡುತ್ತಿದ್ದರೆ, ಜಂಟಿಗಳು ಕೈಗೆ ಹಗ್ಗ ಕಟ್ಟಿಕೊಂಡು ಪರದಾಡುತ್ತಿದ್ದಾರೆ. ಜಂಟಿಗಳು ಹಗ್ಗ ಬಿಚ್ಚುಕೊಂಡರೆ ಎಲ್ಲಂದರಲ್ಲಿ ಓಡಾಡುವಂತಿಲ್ಲ. ಇದೇ ವಿಚಾರಕ್ಕೆ ಈಗ ಬಿಗ್ ಬಾಸ್ ಮನೆಯಲ್ಲಿ ಜಗಳ ಶುರುವಾಗಿದೆ.

ಜಂಟಿಗಳು ಸರಿಯಾಗಿ ನಿಯಮ ಪಾಲನೆ ಮಾಡದೆ ಹೋಗಿದ್ದಕ್ಕೆ ಒಂಟಿಗಳಿಗೆ ಶಿಕ್ಷೆಯಾಗಿದೆ. ಟಾಸ್ಕ್ ಪ್ರಕಾರ ಜಂಟಿಗಳು ಕೆಲವು ರೂಲ್ಸ್ ಫಾಲೋ ಮಾಡಿಲ್ಲ. ಬಿಗ್ ಬಾಸ್ ಎಚ್ಚರಿಕೆ ಕೊಟ್ಟಿದ್ದರೂ ಅದನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ಜಂಟಿಗಳು ಮಾಡಿದ ತಪ್ಪಿಗೆ ಬಿಗ್ ಬಾಸ್ ಮನೆಯ ಕೆಲವು ಅಗತ್ಯ ಸಾಮಗ್ರಿಗಳನ್ನು ವಾಪಸ್ ತೆಗೆದುಕೊಂಡಿದೆ. ಈ ಟಾಸ್ಕ್ ನಲ್ಲಿ ಒಂಟಿಗಳು ರಾಜನಂತೆ ಕೆಲವು ಆದೇಶಗಳನ್ನು ಕೊಡಬೇಕು. ಜಂಟಿಗಳು ಅದನ್ನು ಆಳುಗಳಂತೆ ಪಾಲಿಸಬೇಕು. ಇದು ಕೂಡ ಸರಿಯಾಗಿ ಆಗಿಲ್ಲ ಎಂಬುದೇ ಬಿಗ್ ಬಾಸ್ ಕೋಪಕ್ಕೆ ಕಾರಣವಾಯಿತು.

ಗಿಲ್ಲಿನಟ ಮತ್ತು ಕಾವ್ಯ ಜಂಟಿಯಾಗಿದ್ದಾರೆ. ಈ ಜಂಟಿ ಜೋಡಿ ಸರಿಯಾಗಿ ಹೇಳಿದ್ದನ್ನ ಮಾಡುತ್ತಿಲ್ಲ ಎಂಬ ವಿಷಯಕ್ಕೆ ಅಶ್ವಿನಿಗೌಡ ಫುಲ್ ರಾಂಗ್ ಆಗಿದ್ದಾರೆ. ಗಿಲ್ಲಿನಟ ನಾವು ಹೇಳಿದ್ದನ್ನ ಸರಿಯಾಗಿ ಫಾಲೋ ಮಾಡ್ತಿಲ್ಲ ಎಂದು ವಾದಿಸಿದ ಅಶ್ವಿನಿಗೌಡ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ, ‘ಏಕವಚನದಲ್ಲಿ ಮಾತನಾಡಿದರೆ ಪರಿಣಾಮ ನೆಟ್ಟಗಿರಲ್ಲ’ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಈ ಜಗಳವಾದ ಮೇಲೆ ಗಿಲ್ಲಿನಟ ಮನೆಯವರ ಮುಂದೆ ಕ್ಷಮೆ ಕೇಳಿದ್ದಾರೆ. ಕೆಲವರು ಗಿಲ್ಲಿಗೆ ಡೋಂಟ್ ವರಿ ಅಂತ ಸಮಾಧಾನ ಮಾಡಿದ್ರೆ, ಇನ್ನೂ ಕೆಲವರು ಅಶ್ವಿನಿಗೌಡ ಪರ ನಿಂತಿದ್ದಾರೆ.

‘ಒಂಟಿ ಜಂಟಿ’ ಟಾಸ್ಕ್ ನಡೆಯುತ್ತಿರುವಾಗಲೇ ಬಿಗ್ ಬಾಸ್ ಹೊಸ ಟ್ವಿಸ್ಟ್ ಕೊಟ್ಟಿದೆ. ಮೂರನೇ ವಾರದಲ್ಲಿಯೇ ವಿನ್ನರ್ ಯಾರು ಆಗಬಹುದು ಎಂಬ ಸಿಗ್ನಲ್ ನ ಬಿಗ್ ಬಾಸ್ ಕೊಡುತ್ತಂತೆ. ಇದರಿಂದ 100 ದಿನ ಮನೆಯಲ್ಲಿದ್ದು ಬಿಗ್ ಬಾಸ್ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದ ಸ್ಪರ್ಧಿಗಳಿಗೆ ಢವಢವ ಶುರುವಾಗಿದೆ. ‘ಇದು ಮಾರಿಹಬ್ಬವಲ್ಲ, ಹೆಮ್ಮಾರಿಗಳ ಮಹೋತ್ಸವ’ ಎಂದು ಬಿಗ್ ಬಾಸ್ ಹೇಳುವುದು ನೋಡುತ್ತಿದ್ದರೆ, ಇನ್ನು ಮುಂದೆ ಬಿಗ್ ಬಾಸ್ ಹಾಕುವ ದಾಳ ಬೇರೆ ರೇಂಜಿಗೆ ಇರುತ್ತದೆ ಎನ್ನುವುದಂತೂ ಪಕ್ಕ ಫಿಕ್ಸ್..!