ಬೆಂಗಳೂರು: ನಟ್ಟು ಬೋಲ್ಟು ಟೀಕೆಗೂ ಬಿಗ್ ಬಾಸ್ ವಿವಾದಕ್ಕೂ ಯಾವುದೆ ಸಂಬಂಧವೇ ಇಲ್ಲ, ಈ ವಿಷಯವನ್ನು ಡಿ.ಕೆ ಶಿವಕುಮಾರ್ ಮಾತಿಗೆ ತಳುಕು ಹಾಕುವ ಅವಶ್ಯಕತೆ ಇಲ್ಲ, ಇದರಲ್ಲಿ ಡಿ.ಕೆ ಶಿವಕುಮಾರ್ ಹಸ್ತಕ್ಷೇಪವೂ ಇಲ್ಲ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿದೆ ಮಾತನಾಡಿದ ಖಂಡ್ರೆ, ಮಾಲಿನ್ಯ ನಿಯಂತ್ರಣ ಮಂಡಳಿ ನೊಟೀಸ್ ಗೂ, ಬಿಗ್ ಬಾಸ್ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ, ನಿಯಮದ ಪ್ರಕಾರ ಸಿಎಫ್ಇ ಸಿಎಫ್ಓ ಪಡೆಯಬೇಕಾಗಿತ್ತು. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ, ಹಲವು ಬಾರಿ ನೊಟೀಸ್ ಕೊಟ್ಟರೂ ಅವರು ಬದಲಾಗಲಿಲ್ಲ, ಹೀಗಾಗಿ, ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ಈ ಸಂಬಂಧ ಜಾಲಿವುಡ್ ಮಾಲೀಕರು ಉಚ್ಚ ನ್ಯಾಯಾಲಯಕ್ಕೆ ಹೋಗಿದ್ದಾರೆ, ಅದರ ತೀರ್ಪು ಬಂದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ತಿಳಿಸಿದ್ದಾರೆ.