ಬಿಗ್ಬಾಸ್ ಸೀಸನ್ 12ರ ಫಿನಾಲೆಗೆ ಕ್ಷಣಗಣೆ ಆರಂಭಗೊಂಡಿದ್ದು, ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಪ್ರೋಮೋ ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. ಈ ಬಾರಿಯ ವೋಟಿನ ಲೆಕ್ಕ ಕೊಟ್ಟಿರುವ ಕಿಚ್ಚ ಸುದೀಪ್, ಸ್ಪರ್ಧಿಗಳು ಊಹಿಸಿದ್ದಕ್ಕಿಂತ ಹೆಚ್ಚು ವೋಟ್ ವಿನ್ನರ್ಗೆ ಸಿಕ್ಕಿದೆ.
ಪ್ರೋಮೋದಲ್ಲಿ ಸುದೀಪ್ ಅವರು, ಕಳೆದ ವರ್ಷ ವಿನ್ನರ್ಗೆ 5 ಕೋಟಿ ಚಿಲ್ಲರೆ ವೋಟ್ ಬಂದಿತ್ತು. ಈ ಕ್ರೇಜ್ ಕ್ರಿಯೇಟ್ ಆಗಿ ಈ ಸೀಸನ್ನಲ್ಲಿ ಎಷ್ಟು ವೋಟ್ ಬಂದಿರಬಹುದು? ಅಂತ ಸ್ಪರ್ಧಿಗಳಿಗೆ ಸುದೀಪ್ ಪ್ರಶ್ನೆ ಕೇಳಿದ್ದಾರೆ. ಆಗ ರಘು ಅವರು 12 ರಿಂದ 13 ಕೋಟಿ ವೋಟ್ ಬಂದಿರಬಹುದು ಎಂದರು.
ಗಿಲ್ಲಿ ಇದ್ದವರು 8 ರಿಂದ 10 ಕೋಟಿ ವೋಟ್ ಬಂದಿರಬಹುದು ಎಂದರು. ಮೊದಲನೇ ಸ್ಥಾನ 12 ಗಂಟೆ ತನಕ ಬಂದದ್ದು 37+ ಕೋಟಿ ವೋಟುಗಳು. ಎರಡನೇ ಸ್ಥಾನ ಬಹಳ ಅಂತರದ ಕಮ್ಮಿ ಇದೆ ಎಂದು ಕಿಚ್ಚ ಹೇಳಿದ್ದಾರೆ. ಇನ್ನು ಗ್ರಾಫ್ ಪ್ರಕಾರ ಎರಡನೇ ಸ್ಥಾನಕ್ಕೆ 5,23,89,318 ವೋಟ್ ಬಂದಿದೆ.
ಇದನ್ನೂ ಓದಿ : ಅರುಣಾಚಲದ ಸೇಲಾ ಸರೋವರದಲ್ಲಿ ದುರಂತ | ಸ್ನೇಹಿತನನ್ನು ಉಳಿಸಲು ಹೋಗಿ ಕೇರಳದ ಇಬ್ಬರು ಪ್ರವಾಸಿಗರು ಜಲಸಮಾಧಿ!



















