ಶಸ್ತ್ರಾಸ್ತ್ರ ಕೈಯಲ್ಲಿ ಹಿಡಿದು ರೀಲ್ಸ್ ಮಾಡಿದ್ದ ಕಾರಣಕ್ಕೆ ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ (Vinay Gowda) ಹಾಗೂ ರಜತ್ ಕಿಶನ್ ಅರೆಸ್ಟ್ ಆಗಿದ್ದರು. ಆದರೆ, ರಾತ್ರಿಯೇ ರಿಲೀಸ್ ಆಗಿದ್ದಾರೆ. ಈ ಮಧ್ಯೆ ವಿನಯ್ ಗೌಡ ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಿನ ಹೊಸ ಆರಂಭ ಎಂದು ಬರೆದುಕೊಂಡಿದ್ದಾರೆ.
ರೀಲ್ಸ್ ಗೆ ಸಂಬಂಧಿಸಿದಂತೆ ಇಬ್ಬರನ್ನೂ ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಮಧ್ಯರಾತ್ರಿ ರಿಲೀಸ್ ಆಗಿದ್ದು, ಇಂದು ಮತ್ತೆ ವಿಚಾರಣಎಗೆ ಹಾಜರಾಗಬೇಕಿದೆ. ತಡರಾತ್ರಿ ಇಬ್ಬರಿಗೂ ನೋಟಿಸ್ ನೀಡಿ, ಪೊಲೀಸರು ಬಿಡುಗಡೆ ಮಾಡಿದ್ದಾರೆ ಇಂದು ಮತ್ತೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಸೆಟ್ ಪ್ರಾಪರ್ಟಿಯಿಂದ ನಾವು ರೀಲ್ಸ್ ಮಾಡಿದ್ದೇವೆ. ಆದರೆ, ಅದು ಓರಿಜಿನಲ್ ಅಲ್ಲ ಎಂದು ಇಬ್ಬರೂ ಹೇಳಿಕೆ ನೀಡಿದ್ದಾರೆ. ಮಚ್ಚನ್ನು ಪೊಲೀಸರಿಗೆ ನೀಡಲಾಗಿದೆ. ಈಗ ಮಚ್ಚು ಪರಿಶೀಲಿಸಿದ ಬಳಿಕ ಅದನ್ನು ಫೈಬರ್ ಮಚ್ಚು ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.