ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ವೀಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಅದು ಗಿಲ್ಲ ನಟ. ಆದ್ರೀಗ ಈ ಸೀಸನ್‌ನ ಎಲ್ಲರ ನೆಚ್ಚಿನ ಕಂಟೆಸ್ಟೆಂಟ್ ಆಗಿರುವ ಗಿಲ್ಲಿ ವಿರುದ್ದ ದೂರು ದಾಖಲಾಗಿದೆ.

ಇತ್ತೀಚೆಗೆ ಬಿಗ್‌ಬಾಸ್ ಮನೆಯಲ್ಲಿ ರಿಷಾ ಅವರ ಬಟ್ಟೆಯನ್ನ ಗಿಲ್ಲಿ ತೆಗೆದುಕೊಂಡು ಹೋಗಿ ವಾಶ್ ರೂಂನಲ್ಲಿ ಇಟ್ಟಿದ್ದರು. ಈ ವೇಳೆ ಗಿಲ್ಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಮನೆಯಲ್ಲಿ ಅಗೌರವಯುತವಾಗಿ ನಡೆದುಕೊಂಡಿದ್ದಾರೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.

ಘಟನೆ ನಡೆದು ಬಹಳ ದಿನಗಳ ನಂತರ ದೂರು ನೀಡಲಾಗಿದ್ದು, ಈ ಬಗ್ಗೆ ಪರಿಶೀಲನೆಯನ್ನೂ ಕೂಡ ಮಾಡಲಾಗಿದೆ. ಆ ವಿಡಿಯೋವನ್ನು ಸಂಪೂರ್ಣ ವೀಕ್ಷಣೆ ಮಾಡಿ ಅದರಲ್ಲಿ ಯಾವುದೇ ಸಾಕ್ಷ್ಯ ಸಿಗದ ಕಾರಣ ಲೀಗಲ್ ಸೆಲ್‌ಗೆ ಈ ದೂರನ್ನು ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದು | ಹೈಕೋರ್ಟ್ ಮಹತ್ವದ ಆದೇಶ!



















