ಕಲ್ಕಿ 2898 AD ಸಿನಿಮಾ ಸದ್ಯ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ ಆಗಿದೆ. ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಟ್ರೇಲರ್ ಜೂ. 10ರಂದು ಬಿಡುಗಡೆಯಾಗಲಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಭಾರೀ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಕೇವಲ ತೆಲುಗು ಪ್ರೇಕ್ಷಕರು ಮಾತ್ರವಲ್ಲದೆ, ಇಡೀ ದೇಶ ಪ್ರಭಾಸ್ ನಟನೆಯ ಕಲ್ಕಿ 2898 AD ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಕಾಯುತ್ತಲೇ ಬಂದಿರುವ ಕಲ್ಕಿ ಸಿನಿಮಾ ತಾರಾಗಣದ ವಿಚಾರದಲ್ಲೂ ಕುತೂಹಲ ಮೂಡಿಸಿದೆ.
ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ಕಲ್ಕಿ 2898 AD ಸಿನಿಮಾದ ಟ್ರೇಲರ್ ಜೂನ್ 10ರಂದು ನೋಡುಗರ ಎದುರು ತರಲು ನಿರ್ಮಾಣ ಸಂಸ್ಥೆ ಸಿದ್ಧವಾಗಿದೆ. ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಆಗಿರುವ ಬಿ&ಬಿ ಬುಜ್ಜಿ ಮತ್ತು ಭೈರವ ಸಿರೀಸ್ ಮೂಲಕ ಇನ್ನಷ್ಟು ಕ್ಯೂರಿಯಾಸಿಟಿ ಮೂಡಿಸಿದ ನಿರ್ದೇಶಕ ನಾಗ್ ಅಶ್ವಿನ್, ಇದೀಗ ಟ್ರೇಲರ್ನಲ್ಲೇನಿರಲಿದೆ ಎಂಬುದನ್ನು ತೋರಿಸಲು ಆಗಮಿಸುತ್ತಿದ್ದಾರೆ.
ಟ್ರೇಲರ್ ಬಿಡುಗಡೆಯ ದಿನಾಂಕವನ್ನು ಹೊಸ ಪೋಸ್ಟರ್ ನೊಂದಿಗೆ ಚಿತ್ರ ನಿರ್ಮಾಣ ಸಂಸ್ಥೆ ಘೋಷಿಸಿದೆ. ಪರ್ವತದ ಶಿಖರದ ಮೇಲೆ ನಿಂತ ಭಂಗಿಯಲ್ಲಿ ಭೈರವ ಸೂಪರ್ ಹೀರೋ ರೀತಿಯಲ್ಲಿ ಕಂಡಿದ್ದಾರೆ.