ಬೆಂಗಳೂರು: ಸೋಲದೇವನಹಳ್ಳಿ ರಿಯಲ್ ಎಸ್ಟೇಟ್ ಉದ್ಯಮಿ (Real Estate Businessman) ಲೋಕನಾಥ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಸಿಕ್ಕಿದೆ.
ಉದ್ಯಮಿಯ ಕರಾಳ ಮುಖ ಕೇಳಿ ಪೊಲೀಸರೇ ಈಗ ಕಣ್ಣೀರು ಸುರಿಸುವಂತಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಇಸಿದಂತೆ ಅರೆಸ್ಟ್ ಆಗಿರುವ ಅಮ್ಮ- ಮಗಳ ಸ್ಟೋರಿ ಕೇಳಿ ಈಗ ಎಲ್ಲರೂ ಕಣ್ಣೀರು ಸುರಿಸುವಂತಾಗಿದೆ. ಕೊಲೆಯಾಗಿರುವ ಉದ್ಯಮಿ, ಅಪ್ರಾಪ್ತ ವಯಸ್ಸಿನಲ್ಲಿದ್ದಾಗಲೇ ಯುವತಿಯೊಂದಿಗೆ ಸಲುಗೆ ಬೆಳೆಸಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಡಿಸೆಂಬರ್ನಲ್ಲಿ ಯುವತಿ ಜೊತೆ ಉದ್ಯಮಿ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದ. ಹೆಂಡ್ತಿಯ ತಾಯಿಯ ಮೇಲೂ ಆತ ಕಣ್ಣಿಟ್ಟಿದ್ದ ಎನ್ನಲಾಗಿದೆ. ಹೀಗಾಗಿ ಕೊಲೆಯಾಗಿದೆ ಎನ್ನಲಾಗಿದೆ.
ಅಳಿಯನನ್ನು ಮುಗಿಸುವ ಪ್ಲ್ಯಾನ್ ಮಾಡಿದ್ದ ಅತ್ತೆ, ಹೌ ಟು ಕಿಲ್ ಎನ್ನುವ ಪುಸ್ತಕ ಖರೀದಿಸಿ, ಓದಿದ್ದಾರೆ. ಆನಂತರ ಪಾರ್ಟಿ ನೆಪದಲ್ಲಿ ಮಗಳ ಮೂಲಕ ಅಳಿಯನ ಕರೆಯಿಸಿ, ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.