ಬೆಂಗಳೂರು: ಬಿಡದಿಯಲ್ಲಿ 14 ವರ್ಷದ ಬಾಲಕಿ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಬಾಲಿಕಯು ತಾನೇ ಬಂದು ರೈಲ್ವೇ ಟ್ರ್ಯಾಕ್ ಮೇಲೆ ನಿಂತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೇಪ್ ಅಂಡ್ ಮರ್ಡರ್ ಎಂದು ಹೇಳಲಾಗಿದ್ದ ಪ್ರಕರಣದಲ್ಲಿ ಸದ್ಯ ಬಾಲಕಿಯೇ ರೈಲ್ವೇ ಟ್ರ್ಯಾಕ್ ಮೇಲೆ ಬಂದು ನಿಲ್ಲುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೇರೆ ಆಯಾಮ ಪಡೆಯುವ ಸಾಧ್ಯತೆ ಕಂಡು ಬರುತ್ತಿದೆ.
ಈ ಘಟನೆಗೆ ಬಾಲಕಿಯ ಪೋಷಕರು, ರೇಪ್ ಆಂಡ್ ಮರ್ಡರ್ ಎಂದು ಆರೋಪಿಸಿದ್ದರು. ಬಾಲಕಿಗೆ ಮಾತು ಬರುವುದಿಲ್ಲ ಹಾಗೂ ಕಿವಿಯೂ ಕೇಳುವುದಿಲ್ಲ ಎಂದು ಹೇಳಲಾಗಿತ್ತು. ಸದ್ಯ ಬಾಲಕಿ ತಾನಾಗಿಯೇ ಬಂದು ಟ್ರ್ಯಾಕ್ ಮೇಲೆ ನಿಲ್ಲುವ ದೃಶ್ಯ ಸೆರೆಯಾಗಿದೆ.