ಬೆಂಗಳೂರು : ಇಲ್ಲಿಯ ಮಂಜುನಾಥ ನಗರದಲ್ಲಿ ನಡೆದಿದ್ದ ಮರ್ಡರ್ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಫೆ. 18ರಂದು ನಡೆದಿತ್ತು. ಮೋಹನ್ ರಾವ್(40) ಭೀಕರವಾಗಿ ಹತ್ಯೆಯಾಗಿದ್ದರು. ಅವರ ಮುಖಕ್ಕೆ ಟೇಪ್ ಸುತ್ತಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿತ್ತು. ಮೋಹನ್ ರಾವ್ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಮೋಹನ್ ಪ್ರೇಯಸಿ ಹಾಗೂ ಸಹನಟಿ ಊರ್ಮಿಳಾ ಅಲಿಯಾಸ್ ಬಿಂದು ಎಂಬಾಕೆಯನ್ನು ಬಂಧಿಸಿದ್ದಾರೆ. ಸಹನಟಿ ಭಜರಂಗಿ, ಪೊಲೀಸ್ ಕ್ವಾಟ್ರಸ್, ಕಾಲಭೈರವ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಬಿಂದು ಜೊತೆ ಲವ್ವಿಡವ್ವಿ ನಡೆಸುತ್ತಿದ್ದ ಧನುಷ್ ಹಾಗೂ ವಿನಯ್ ಎಂಬ ಇಬ್ಬರು ಯುವಕರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದ ಕುರಿತು ತನಿಖೆ ಕೈಗೊಂಡಿರುವ ಬಾಗಲಗುಂಟೆ ಪೊಲೀಸರಿಗೆ ಕೆಲವು ಶಾಕಿಂಗ್ ವಿಷಯಗಳು ಬಯಲಿಗೆ ಬಂದಿವೆ. ಕೊಲೆಯಾಗಿರುವ ಮೋಹನ್, ಸಣ್ಣಪುಟ್ಟ ಫೈನಾನ್ಸ್ ಮಾಡಿಕೊಂಡಿದ್ದ. ಇತ್ತೀಚೆಗೆ ಹೆಂಡತಿಯನ್ನು ಬಿಟ್ಟು ಬಿಂದು ಜೊತೆ ಲಿವಿಂಗ್ ರಿಲೇಷನ್ ಶಿಪ್‌ನಲ್ಲಿದ್ದ. ಇನ್ನೊಂದೆಡೆ ಪತಿ ಬಿಟ್ಟಿದ್ದ ಬಿಂದು ಕೂಡ ಮೋಹನ್ ಜೊತೆ ಉಳಿದುಕೊಂಡಿದ್ದಳು.
ಈ ಮಧ್ಯೆ ಬಿಂದುಗೆ ಬೇರೆ ಯುವಕರ ಜೊತೆ ಲವ್ವಿಡವ್ವಿ ಶುರುವಾಗಿದೆ. ಮೋಹನ್ ಇಲ್ಲದ ವೇಳೆ ಯುವಕರನ್ನು ತನ್ನ ಮನೆಗೆ ಕರೆಯಿಸಿಕೊಳ್ಳುತ್ತಿದ್ದಳಂತೆ. ಯುವಕರು ಕೂಡ ಮೋಹನ್‌ಗೆ ಪರಿಚಯವಾಗಿದ್ದರು. ಕೊಲೆಯಾದ ದಿನ ಮೃತ ಮೋಹನ್, ಯುವಕರು ಹಾಗೂ ಬಿಂದು ಸೇರಿ ಪಾರ್ಟ್ ಮಾಡಿದ್ದಾರೆ.
ಆ ವೇಳೆ ಮೋಹನ್, ಕುಡಿದ ಮತ್ತಿನಲ್ಲಿ ವಯಾಗ್ರಾ ಮಾತ್ರೆ ಸೇವಿಸಿ ಬಿಂದುವನ್ನು ಲೈಂಗಿಕ ಬಳಕೆಗೆ ಬಲವಂತ ಮಾಡಿದ್ದಾನೆ. ಆಕೆಯ ಬಟ್ಟೆಗಳನ್ನು ಬಲವಂತವಾಗಿ ತೆಗೆದು ಎಳೆದಾಡಿದ್ದಾನೆ. ಆ ವೇಳೆ ಕೋಪಗೊಂಡ ವಿನಯ್ ಚಾಕುವಿನಿಂದ ಇರಿದಿದ್ದಾನೆ. ನಂತರ ಬಾಯಿ, ಮೂಗಿಗೆ ಸೆಲ್ಲೋ ಟೇಪ್ ಸುತ್ತಿ, ಕೈ, ಕಾಲು ಕಟ್ಟಿ ಮನಬಂದಂತೆ ಚಾಕು ಚುಚ್ಚಿದ್ದಾರೆ ಎಂಬುವುದು ತನಿಖೆಯಲ್ಲಿ ತಿಳಿದುಬಂದಿದೆ. ಆನಂತರ ಸ್ಥಳದಿಂದ ಪ್ರೇಯಸಿ ಹಾಗೂ ಯುವಕರು ಪರಾರಿಯಾಗಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟಿ ಸೇರಿದಂತೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಟಗರು ಕಾಳಗದಂತೆ ‘ಡಿಚ್ಚಿ ಹಬ್ಬ’.. ಅತ್ತಿಗೆ-ನಾದಿನಿ ತಲೆ-ತಲೆ ಹಿಡಿದು ಡಿಚ್ಚಿ ಹೊಡೆಯುವುದೇಕೆ?



















