ಬಿಗ್‌ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ ವಾರವಾಗಿದೆ. ಕಳೆದ ಭಾನುವಾರ ಶೋ ಪ್ರಾರಂಭವಾಗಿತ್ತು. ಈ ಬಾರಿ 19 ಮಂದಿ ಸದಸ್ಯರು ದೊಡ್ಮನೆ ಸೇರಿದ್ದರು. ಆದರೆ, ಶೋ ಶುರುವಾಗಿ 24 ಗಂಟೆಗಳಲ್ಲೇ, ಎಂದರೆ, ಮೊದಲ ದಿನವೇ ಕಿರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದರು.
ಹೌದು.. ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಹೋದಷ್ಟೇ ವೇಗವಾಗಿ ಮನೆಯಿಂದ ಹೊರಬಂದಿದ್ದರು. ಆದರೆ, ಇದೀಗ ಬಿಗ್ ಬಾಸ್ ಎಲ್ಲರಿಗೂ ಶಾಕ್ ನೀಡಿದೆ. ಎಲಿಮಿನೇಟ್ ಆಗಿ ಹೊರ ಬಂದಿದ್ದ ಅದೇ ರಕ್ಷಿತಾ ಶೆಟ್ಟಿಯನ್ನು ಮತ್ತೆ ಬಿಗ್ ಬಾಸ್ ಮನೆಯೊಳಕ್ಕೆ ಕಳಿಸಿದೆ.
ಕಿಚ್ಚ ಸುದೀಪ್, ರಕ್ಷಿತಾ ಶೆಟ್ಟಿಯನ್ನು ವೇದಿಕೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ವೇಳೆ ರಕ್ಷಿತಾ ಶೆಟ್ಟಿ ಹರುಳು ಉರಿದಂತೆ ಮಾತನಾಡಿದ್ದಾರೆ. ನನ್ನನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಿದ್ದು ಏಕೆ ಎಂದು ಒಳಗೆ ಹೋಗಿ ಕೇಳುತ್ತೇನೆ. ಕೇವಲ ಕವರ್ ನೋಡಿ ನನ್ನನ್ನು ಜಡ್ಜ್ ಮಾಡಬೇಡಿ ಎಂದು ಹೇಳುತ್ತೇನೆ. ನಾನು ಬಿಗ್ ಬಾಸ್ ನಲ್ಲಿ ಚೆನ್ನಾಗಿ ಆಡುತ್ತೇನೆ. ನನ್ನ ಬಗ್ಗೆ ಅವರಿಗೆಲ್ಲಾ ಗೊತ್ತಿಲ್ಲ ಎಂದು ಗುಡುಗಿದ್ದಾರೆ.
ರಕ್ಷಿತಾ ಶೆಟ್ಟಿ ಜೊತೆಗಿನ ಕಿಚ್ಚನ ಮಾತುಕತೆಯನ್ನು ಕಲರ್ಸ್ ಕನ್ನಡ ಚಾನಲ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್‌ನಲ್ಲಿ ಟ್ವಿಸ್ಟ್ ಇರುತ್ತೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಎಲಿಮಿನೇಟ್ ಮಾಡಿ ಎಂದು ರಕ್ಷಿತಾ ಶೆಟ್ಟಿಯನ್ನು ಒಂಟಿ ತಂಡದಿಂದ ಎಲಿಮಿನೇಟ್ ಮಾಡಿಸಿ, ಈಗ ಅದೇ ಬಿಗ್ ಬಾಸ್ ರಕ್ಷಿತಾ ಶೆಟ್ಟಿಯನ್ನು ಮನೆಯೊಳಕ್ಕೆ ಕಳಿಸಿ, ಒಂಟಿ ತಂಡದ ಸೀನಿಯರ್ ಗಳಿಗೆ ಟಾಂಗ್ ನೀಡಿದೆ.



















