ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ಬಿಗ್ ಶಾಕ್ ಎದುರಾಗಿದೆ.
ಗನ್ ವಿಷಯದಲ್ಲಿ ಕಮಿಷನರ್ ಆದೇಶದ ಬೆನ್ನಲ್ಲೇ ದರ್ಶನ್ ಗನ್ ಸೀಜ್ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ದರ್ಶನ್ ಹೊರ ಬಂದಿದ್ದರು. ಹೀಗಾಗಿ ಪೊಲೀಸರು ಗನ್ ಲೈಸೆನ್ಸ್ ವಿಷಯದಲ್ಲಿ ನೋಟಿಸ್ ನೀಡಿದ್ದರು.
ಆದರೆ, ಈಗ ಪೊಲೀಸ್ ಕಮಿಷನರ್ ದಯಾನಂದ್ ತಾತ್ಕಾಲಿಕವಾಗಿ ಗನ್ ಪರವಾನಗಿ ರದ್ದು ಮಾಡಿದ್ದು, ಇಂದು ಖುದ್ದು ದರ್ಶನ್ ಮನೆಗೆ ತೆರಳಿ ಆರ್ ಆರ್ ನಗರ ಪೊಲೀಸರು ಗನ್ ಸೀಜ್ ಮಾಡಿದ್ದಾರೆ.
ಚೆನ್ನಮ್ಮನಕೆರೆಯ ವಿಜಯಲಕ್ಷ್ಮೀ ಪ್ಲಾಟ್ ನಲ್ಲಿದ್ದ ದರ್ಶನ್ ಗನ್ ಸೀಜ್ ಮಾಡಲಾಗಿದೆ. ಅಲ್ಲದೇ, ದರ್ಶನ್ ಹೆಸರಿನಲ್ಲಿದ್ದ ಪಿಸ್ತೂಲ್ ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.