ಬಾಗಲಕೋಟೆ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಕ್ಸೋ ಕೇಸಲ್ಲಿ ಜೈಲು ಪಾಲಾಗಿದ್ದ ಉತ್ತರ ಕರ್ನಾಟಕದ ಜನಪ್ರಿಯ ಜನಪದ ಗಾಯಕ, ಯೂಟ್ಯೂಬ್ ಸ್ಟಾರ್ ಮ್ಯೂಸಿಕ್ ಮೈಲಾರಿಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಮ್ಯೂಸಿಕ್ ಮೈಲಾರಿಗೆ ಕೆಲ ಷರತ್ತುಗಳನ್ನು ವಿಧಿಸಿ ಇಂದು (ಫೆ.24) ಬಾಗಲಕೋಟೆ ಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ. ಒಂದು ಲಕ್ಷ ಶ್ಯುರಿಟಿ ಬಾಂಡ್, ಪ್ರಾಷಿಕ್ಯೂಷನ್ ಮೇಲೆ ಪ್ರಭಾವ ಬೀರಬಾರದು, ಇದೇ ತರಹದ ಅಪರಾಧ ಮತ್ತೆ ಮಾಡಬಾರದು ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಈ ಮೂಲಕ ಕಳೆದ ಡಿಸೆಂಬರ್ನಲ್ಲಿ ಜೈಲು ಸೇರಿದ್ದ ಮೈಲಾರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮ್ಯೂಸಿಕ್ ಮೈಲಾರಿಯನ್ನು ಮಹಾಲಿಂಗಪುರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಿಸಿ ತಲೆಮರಿಸಿಕೊಂಡಿದ್ದ ಮೈಲಾರಿಯನ್ನು 2025ರ ಡಿಸೆಂಬರ್ 17ರಂದು ಮಹಾರಾಷ್ಟ್ರಕ್ಕೆ ತೆರಳುತ್ತಿರುವಾಗ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ ; ಕೆನಡಾ ಪ್ರಧಾನಿ ಭಾರತ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ | 26/11 ದಾಳಿ ರೂವಾರಿ ತಹವ್ವುರ್ ರಾಣಾ ಪೌರತ್ವ ರದ್ದು?



















