ಬೆಂಗಳೂರು: ನಡು ರಸ್ತೆಯಲ್ಲೇ ಬೈಕ್ ಸವಾರರು ಬಿಗ್ ಫೈಟ್ ನಡೆಸಿರುವ ಘಟನೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರರು ರಸ್ತೆ ಮಧ್ಯೆ ಫೈಟ್ ನಡೆಸಿದ್ದಾರೆ. ಆನೇಕಲ್ ತಾಲ್ಲೂಕಿನ ಚಂದಾಪುರ ಕೆಇಬಿ ಬಳಿ ಈ ಘಟನೆ ನಡೆದಿದೆ. ಬೈಕ್ ಟಚ್ ಆಗಿದ್ದಕ್ಕೆ ಬೈಕ್ ಸವಾರರಿಬ್ಬರ ಮಧ್ಯೆ ಕಿರಿಕ್ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿ ನಡು ರಸ್ತೆಯಲ್ಲೇ ಸವಾರರಿಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಬಟ್ಟೆಗಳನ್ನ ಹಿಡಿದು ಎಳೆದಾಡಿಕೊಂಡು ಪಂಚ್ ಕೊಟ್ಟಿದ್ದಾರೆ. ಸ್ಥಳೀಯರು ಮಧ್ಯೆ ಪ್ರವೇಶಿಸಿ ಗಲಾಟೆ ನಿಲ್ಲಿಸಲು ಯತ್ನಿಸಿದರೂ ಇಬ್ಬರೂ ಸುಮ್ಮನಾಗಿಲ್ಲ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.