ಬೆಂಗಳೂರು: ಕನ್ನಡ ಚಿತ್ರರಂಗದ ಕ್ಯಾಡ್ಬರೀಸ್ ಧರ್ಮ ಕೀರ್ತಿರಾಜ್ ಕಳೆದ 17 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನವಗ್ರಹ ಸಿನಿಮಾ ಇವರಿಗೆ ಸಿಕ್ಕಾಪಟ್ಟೆ ಯಶಸ್ಸು ತಂದುಕೊಟ್ಟಂತಹ ಸಿನಿಮಾ. ಅದಾದ ಬಳಿಕ ಧರ್ಮ ಕೀರ್ತಿರಾಜ್ ತೆರೆ ಮರೆಯಲ್ಲಿಯೇ ಉಳಿದುಕೊಂಡಿದ್ದರು. ಈಗ ಮತ್ತೆ ಅಬ್ಬರಿಸಲು ಸಜ್ಜಾಗಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಧರ್ಮರಾಜ್ ಮನೆ ಮಾತಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಧರ್ಮ ಕೀರ್ತಿರಾಜ್ ಅವರ ಗುಣ ನಡತೆ ಜನರಿಗೆ ಬಹಳ ಲೈಕ್ ಆಗಿತ್ತು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ ಇದೀಗ ಬ್ಲಡ್ ರೋಸಸ್ ಎನ್ನುವ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಲುಕ್ ನಲ್ಲಿ ಧರ್ಮಾ ಕೀರ್ತಿರಾಜ್ ಅವರು ಆಕ್ಟ್ ಮಾಡಲಿದ್ದಾರೆ. ಈ ಗುಡ್ ನ್ಯೂಸ್ ಕೇಳಿ ಇವರ ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ನಟಿ ಅಪ್ಸರ ರಾಣಿ ಧರ್ಮ ಕೀರ್ತಿರಾಜ್ ಗೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ.