ಹಾಲಿ ಚಾಂಪಿಯನ್ 24 ಗ್ರಾಂಡ್ ಸ್ಲಾಂ ವಿಜೇತ ಸೆರ್ಬಿಯಾದ ನೊವಾಕ್ ಜೋಕೊವಿಕ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಆಘಾತಕಾರಿ ಸೋಲಿಗೆ ಕಾರಣರಾಗಿದ್ದಾರೆ.
ಈ ಮೂಲಕ ಈ ವರ್ಷದಲ್ಲಿ ಯಾವುದೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲ್ಲದೆ ಕಹಿ ಘಟನೆ ಅನುಭವಿಸಿದ್ದಾರೆ. ಅಲ್ಲದೇ, ಅವರ ದಾಖಲೆಯ 25ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಕನಸು ನುಚ್ಚು ನೂರಾಗಿದೆ. 7 ವರ್ಷಗಳ ನಂತರ ಒಂದೂ ಗ್ರಾಂಡ್ ಸ್ಲಾಂ ಗೆಲ್ಲದೆ ವರ್ಷ ಮುಗಿಸಿದ ಕಹಿ ಅನುಭವಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ 37 ವರ್ಷದ ಜೋಕೊವಿಕ್ ಯುಎಸ್ ಓಪನ್ ನ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ 4-6,4-6, 6-2, 4-6 ರಿಂದ 28ನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಅಲೆಕ್ಸಿ ಪಾಪಿರಿನ್ ವಿರುದ್ಧ ಸೋತು ಸುಣ್ಣವಾಗಿದ್ದಾರೆ.
2005 ಮತ್ತು 2006ರಲ್ಲಿ ಕೊನೆಯದಾಗಿ 3ನೇ ಸುತ್ತು ದಾಟಲು ವಿಫಲರಾಗಿದ್ದ ಜೋಕೊವಿಕ್, ಇದುವರೆಗೆ 10 ಬಾರಿ ಯುಎಸ್ ಓಪನ್ ನಲ್ಲಿ 10 ಬಾರಿ ಫೈನಲ್ ತಲುಪಿದ್ದಾರೆ. ಈ ಪೈಕಿ ನಾಲ್ಕು ಬಾರಿ ಚಾಂಪಿಯನ್ ಆಗಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಪದಕ ಜಯಿಸಿದ್ದ ಮೂವರು ಆಟಗಾರರಾದ ಜೋಕೊವಿಕ್ (ಚಿನ್ನ), ಅಲ್ಕರಾಜ್ (ಬೆಳ್ಳಿ), ಲೊರೆಂಜೊ ಮುಸ್ಸೆಟ್ಟಿ (ಕಂಚು) 24 ಗಂಟೆಗಳ ಅಂತರದಲ್ಲಿ ಯುಎಸ್ ಓಪನ್ ನಿಂದ ಹೊರ ಬಿದ್ದಿದ್ದಾರೆ.
ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಇಂಡೋನೇಷ್ಯಾದ ಅಲ್ ದಿಲಾ ಸುಟ್ ಜಿದಿ ಜೋಡಿ 7-6, 7-6 ರಿಂದ ನೆದರ್ಲೆಂಡ್ ನ ಡೆಮಿ ಸ್ಕ್ರುಜ್- ಜರ್ಮನಿಯ ಟಿಮ್ ಪುಯೆಟ್ಜ ಎದುರು ಗೆಲುವು ಕಂಡು 16ರ ಘಟ್ಟ ತಲುಪಿದ್ದಾರೆ.