ಬೀದರ್ | ಮಕರ ಸಂಕ್ರಾಂತಿ ನಿಮಿತ್ತ ಗಾಳಿಪಟ ಹಾರಿಸಿದ ವೇಳೆ ನಿಷೇಧಿತ ಚೀನಿ ಮಾಂಜಾ ದಾರಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ನರಳಾಡಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ನಿರ್ಣಾ ಕ್ರಾಸ್ ಬಳಿ ಸಂಭವಿಸಿದೆ.
ಮಗಳನ್ನು ಕರೆದುಕೊಂಡು ಬರಲು ವ್ಯಕ್ತಿ ಬೈಕ್ ಮೇಲೆ ಹೋಗುತ್ತಿದ್ದಾಗ ಚೀನಿ ಮಾಂಜಾ ದಾರಕ್ಕೆ ಕತ್ತು ಸಿಲುಕಿ ಸ್ಥಳದಲ್ಲೇ ವ್ಯಕ್ತಿ ದುರಂತ ಅಂತ್ಯ ಕಂಡಿದ್ದಾರೆ. ಬೈಕ್ ಮೇಲೆ ವೇಗವಾಗಿ ಹೋಗುತ್ತಿದ್ದಾಗ ಕಣ್ಣಿಗೆ ಕಾಣಿಸದ ಚೀನಿ ಮಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಬೀದರ್ ತಾಲ್ಲೂಕಿನ ಬೊಂಬಳಗಿ ಗ್ರಾಮದ 48 ವರ್ಷದ ಸಂಜುಕುಮಾರ್ ಸಾವನ್ನಪ್ಪಿದ ದುರ್ದೈವಿ. ಸಂಕ್ರಾಂತಿಯಂದೇ ಚೀನಿ ದಾರದಿಂದ ವ್ಯಕ್ತಿ ಮೃತಪಟ್ಟಿದ್ದು, ಮನ್ನಾಏಖ್ಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬ್ರಾಡ್ ವಿಷನ್ ವರ್ಲ್ಡ್ ಸ್ಕೂಲ್‌ನಲ್ಲಿ ಆರ್ಮಿ ದಿವಸ್-ಫೌಂಡರ್ ಡೇ ಅದ್ದೂರಿ ಆಚರಣೆ!



















