ಬೀದರ್ : ಬೆಳೆ ಹಾನಿ ಪರಿಹಾರಕ್ಕಾಗಿ ಬಸವಕಲ್ಯಾಣದಲ್ಲಿ ಶಾಸಕ ಶರಣು ಸಲಗರ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಪಟಾಪಟಿ ಚಡ್ಡಿ, ಲುಂಗಿ ಹಾಕಿಕೊಂಡು ಹೆಗಲ ಮೇಲೆ ಬಾರುಕೋಲ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಮಹಾತ್ಮಾ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಅರೆಬೆತ್ತಲೆ ಹೋರಾಟ ಮಾಡಿದ್ದಾರೆ.

ಈ ಹೋರಾಟದಲ್ಲಿ ಬಸವಕಲ್ಯಾಣ ಕ್ಷೇತ್ರದ ಸಾವಿರಾರು ರೈತರು ಪಾಲ್ಗೊಂಡಿದ್ದಾರು. ಇನ್ನು ಕೈಯಲ್ಲಿ ಮಳೆಯಿಂದ ಹಾನಿಯಾದ ತೊಗರಿ ಬೆಳೆ ಹಿಡಿದು, ಬೆಳೆ ಹಾನಿ ವಿತರಣೆಯಲ್ಲಿ ವಿಳಂಬ ನೀತಿ, ವೈಜ್ಞಾನಿಕ ವರದಿ, ಕಡಿಮೆ ಪರಿಹಾರ ಖಂಡಿಸಿ ಹೋರಾಟ ನಡೆಸಲಾಯಿತು.