ಬೀದರ್ : ಹುಮನಾಬಾದ್ ತಾಲೂಕಿನ ಮುದ್ನಾಳ್ ಗ್ರಾಮದಿಂದ 4.5 ಕಿ.ಮೀ. ದೂರದಲ್ಲಿ ಪಶ್ಚಿಮ ದಿಕ್ಕಿಗೆ 5 ಕಿ.ಮೀ ಆಳದಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 5:47 ಗಂಟೆಗೆ 3.0 ಪ್ರಮಾಣದ ಭೂಕಂಪನ ಸಂಭವಿಸಿದೆ ಎಂದು ದಾಖಲಾಗಿದೆ.
ಈ ಭೂಕಂಪನ ಕೇಂದ್ರವು ಹುಮನಾಬಾದ್ ತಾಲೂಕಿನ ಇಟಗಾ ಗ್ರಾಮದಿಂದ 5.1ಕಿ.ಮೀ ನೈಋತ್ಯ, ಚಿಟಗುಪ್ಪ ತಾಲೂಕಿನ ಕೊಡಂಬಲ್ ಗ್ರಾಮದಿಂದ 7.3ಕಿ.ಮೀ ಪಶ್ಚಿಮ-ವಾಯುವ್ಯ, ಚಿಟಗುಪ್ಪ ನಗರದಿಂದ 9.2 ಕಿ.ಮೀ ನೈರುತ್ಯ ಹಾಗೂ ಕಲಬುರಗಿ ಜಿಲ್ಲೆಯ ಭೂಕಂಪ ವೀಕ್ಷಣಾಲಯದಿಂದ 57 ಕಿ.ಮೀ ವಾಯುವ್ಯದಲ್ಲಿ ಇದೆ.
ಈ ಭೂಕಂಪನದ ಕೇಂದ್ರ ಬಿಂದುವಿನ ತೀವ್ರತೆಯ ನಕ್ಷೆಯ ಪ್ರಕಾರ ಗಮನಿಸಿದರೆ ಇದು ಅತೀ ಕಡಿಮೆ ತೀವ್ರತೆಯಾಗಿದೆ. ಈ ರೀತಿಯ ಭೂಕಂಪನವು ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಆದರೂ ಸ್ಥಳೀಯವಾಗಿ ಕಂಪನಗಳು ಅನುಭವಿಸಬಹುದು. ಭೂಕಂಪನದ ಪ್ರಮಾಣ ಮತ್ತು ತೀವ್ರತೆ ಕಡಿಮೆ ಇರುವುದರಿಂದ ಸಮುದಾಯವು ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚರಣಾ ಕೇಂದ್ರವು ಧೃಡಪಡಿಸಿದೆ.
ಇದನ್ನೂ ಓದಿ : ದೇಶದ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ RSSನ್ನು ನಿಷೇಧಿಸಬೇಕು | ಮಲ್ಲಿಕಾರ್ಜುನ ಖರ್ಗೆ



















