ಕೋತಿ ತಾನು ಕೆಡೋದಲ್ಲದೇ ವನನೆಲ್ಲಾ ಕೆಡಿಸಿತು ಎನ್ನುವ ಹಾಗೆ ಇಲ್ಲೊಬ್ಬ ಕುಡುಕ ತಾನು ಕುಡಿದದ್ದಲ್ಲದೇ ನಾಯಿಗೂ ಎಣ್ಣೆ ಕುಡಿಸಿದ್ದಾನೆ. ತನ್ನ ಎಣ್ಣೆ ಪಾರ್ಟ್ನರ್ ಆಗಿ ಮಾಡಿಕೊಂಡು ನಾಯಿ ಜೊತೆಗೆ ತೂರಾಡುತ್ತಾ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಘುಮೂರ್ತಿ (@raghumurthy77) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ಇವನ್ಯಾರ್ ಗುರು ತಾನ್ ಕುಡಿಯೋದಲ್ದೆ ನಾಯಿಗೂ ಕುಡುಸ್ಕೊಂಡು ಎಂದು ಶೀರ್ಷಿಕೆ ಕೊಟ್ಟು ವಿಡಿಯೋ ವೈರಲ್ ಮಾಡಿದ್ದಾರೆ.
ವ್ಯಕ್ತಿಯೊಬ್ಬನು ನಾಯಿಗೂ ಎಣ್ಣೆ ಕುಡಿಸಿದ್ದಾನೆ. ವ್ಯಕ್ತಿಯ ಕೈಯಲ್ಲಿನ ಎಣ್ಣೆ ತುಂಬಿದ ಕವರ್‌ನ್ನು ಕಾಣಬಹುದು. ಎಣ್ಣೆಯ ಮತ್ತಿನಲ್ಲಿ ವ್ಯಕ್ತಿ ಹಾಗೂ ನಾಯಿಯು ತೂರಾಡುತ್ತಾ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಂಡುಬಂದಿದೆ.